Apr 9, 2022, 4:38 PM IST
ರಾಜ್ಯದಲ್ಲಿ ಹಿಜಾಬ್ (Hijab),ಹಲಾಲ್(Halal), ಜಟ್ಕಾ ಕಟ್(Jhatka cut),ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಮ್ಯಾಂಗೋ ವಾರ್, ಮೈಕ್ ನಂತಹ ದಂಗಲ್ ನಡೀತಿದೆ. ಇದರ ನಡುವೆ ಸೌಹಾರ್ದತೆಗೆ, ಸಾಮರಸ್ಯಕ್ಕೆ ಸಾಕ್ಷಿ ಎಂಬಂತೆ ಮುಸ್ಲಿಂ ವ್ಯಕ್ತಿ ಗಣೇಶನಿಗೆ ದೇಗುಲ ಕಟ್ಟಿಸಿದ್ದಾರೆ.
'ಜಟ್ಕಾ ಅಭಿಯಾನ ಯಾವುದೇ ಧರ್ಮದ ವಿರುದ್ಧ ಅಲ್ಲ, ಹಿಂದೂ ಯುವಕರಿಗೆ ಉದ್ಯೋಗ ಕೊಡಿಸಲು'
ಈತನ ಹೆಸರು ರೆಹಮಾನ್ (Rahman)ಕೇರಳ ಮೂಲದವರು. 80 ರ ದಶಕದಲ್ಲಿ ಗಡಿಜಿಲ್ಲೆ ಚಾಮರಾಜನಗರಕ್ಕೆ (Chamarajanagara )ಕೆಲಸ ಅರಸಿ ಬರುತ್ತಾರೆ. ನಂತರ ಚಿಕ್ಕಹೊಳೆ ಜಲಾಶಯದಲ್ಲಿ (Chiklihole Reservoir) ಗೇಟ್ ಆಪರೇಟರ್ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಇವರ ನಿವೃತ್ತಿ ಹೊಂದುವ ಒಂದು ತಿಂಗಳ ಮುಂಚೆ ಜಲಾಶಯದ ಬಳಿಯಿದ್ದ ಪುಟ್ಟ ಗಣೇಶನ ವಿಗ್ರಹ ಕಳುವಾಗಿತ್ತು. ಅದೇ ದಿನ ರಾತ್ರಿ ರೆಹಮಾನ್ ಅವರಿಗೆ ಗಣೇಶ ಕನಸಿನಲ್ಲಿ ಬಂದು ನನಗೊಂದು ದೇವಾಲಯ ನಿರ್ಮಿಸು ಎಂದು ಹೇಳಿತ್ತು ಎನ್ನುವ ಮಾತನ್ನು ರೆಹಮಾನ್ ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯನ್ಮೋಖರಾದ್ರು.
ಅದೇ ವೇಳೆಗೆ ಅವರು ನಿವೃತ್ತಿ ಹೊಂದಿದ ಹಣ ಸಹ ಕೈ ಸೇರಿತ್ತು. ಆ ಹಣದಲ್ಲೇ ದೇವಾಲಯ ನಿರ್ಮಿಸಿದ್ರು. ಅಲ್ಲದೇ ದೇವಾಲಯಕ್ಕೆ ಓರ್ವ ಅರ್ಚಕರನ್ನು ನೇಮಿಸಿದ್ದಾರೆ. ಗಣಪತಿ ಪೂಜೆಯಿಂದ ನನ್ನ ಬದುಕು ಹಸನಾಗಿದೆ. ವಿಘ್ನ ವಿನಾಯಕನ ಆಶಿರ್ವಾದದಿಂದ ನೆಮ್ಮದಿಯಾಗಿದ್ದೇನೆ.ಎಲ್ಲರ ರಕ್ತವೂ ಒಂದೇ ಬಣ್ಣ. ಹಾಗೇ ದೇವರೂ ಸಹ ಒಬ್ಬನೇ ಎಂದು ನಂಬಿ ಗಣೇಶನನ್ನು ಆರಾಧಿಸುತ್ತಿದ್ದೇನೆ ಎನ್ನುತ್ತಾರೆ ರೆಹಮಾನ್.