ರಾಜ್ಯದ ಏಕೈಕ ಮಹಿಳಾ ವಿವಿಗೆ ಸಂಚಕಾರ: ಸಚಿವರ ಉತ್ತರ ಕಂಡು ಮಹಿಳಾ ಸಮುದಾಯದಲ್ಲಿ ಆತಂಕ

Mar 19, 2022, 11:10 AM IST

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ(ಮಾ.19): ಮಹಿಳೆಯರ ಸಬಲೀಕರಣಕ್ಕಾಗಿ ಹುಟ್ಟಿಕೊಂಡ ರಾಜ್ಯದ ಏಕೈಕ ಮಹಿಳಾ ವಿವಿಗೆ ರಾಜ್ಯ ಸರ್ಕಾರ ಕೊನೆ ಮೊಳೆ ಹೊಡೆಯೋದಕ್ಕೆ ರೆಡಿಯಾಗಿದೆ. ವಿಜಯಪುರದಲ್ಲಿರುವ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯಕ್ಕೆ ರಾಜ್ಯದ ಏಕಮೇವ ಮಹಿಳಾ ವಿವಿ ಅನ್ನೋ ಹೆಗ್ಗಳಿಕೆ ಇದೆ. ಆದ್ರೆ ಇದೆ ಮಹಿಳಾ ವಿವಿಗೆ ಸರ್ಕಾರವೇ ಗಂಡಾಂತರ ತಂದಿಟ್ಟಿದೆ. ರಾಜ್ಯದಲ್ಲಿ ಮಹಿಳಾ ಸಮುದಾಯದ ಹೆಮ್ಮೆ ಎನ್ನುವಂತಿದ್ದ ಅಕ್ಕಮಹಾದೇವಿ ಮಹಿಳಾ ವಿ.ವಿಯನ್ನ ಕೇವಲ ವಿಜಯಪುರ ಜಿಲ್ಲೆಗೆ ಸೀಮಿತ ಮಾಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ.  ಕ್ಲಸ್ಟರ್ ವಿ.ವಿ ಅಥವಾ ಕ್ಯಾಂಪಸ್ ಬೇಸ್ಡ್ ವಿಶ್ವವಿದ್ಯಾಲಯವಾಗಿ ರೂಪಿಸಲು ಸರ್ಕಾರ ತೀರ್ಮಾನಿಸಿದೆ. ಹಾಗಂದ ಮಾತ್ರಕ್ಕೆ ಇದು ನಾವು ಹೇಳ್ತಿರೋದಲ್ಲ. ಸ್ವತಃ ಉನ್ನತ ಶಿಕ್ಷಣ ಸಚಿವ ಅಶ್ವತ್‌ ನಾರಾಯಣ ಸದನದಲ್ಲಿ ನೀಡಿದ ಉತ್ತರವಿದು.

Russia-Ukraine War: ದಾವಣಗೆರೆ SS ಕಾಲೇಜಿಗೆ ನವೀನ್ ದೇಹದಾನ ಮಾಡಲು ಕುಟುಂಬಸ್ಥರ ನಿರ್ಧಾರ

"ಅಕ್ಕಮಹಾದೇವಿ ಮಹಿಳಾ ವಿ.ವಿ ಹೆಸರಲ್ಲಿನ 'ಮಹಿಳಾ' ಪದ ಕೈಬಿಟ್ಟು ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಹೆಸರು ಬದಲಿಸಲು ಸರ್ಕಾರ ಹುನ್ನಾರ ನಡೆಸಿದೆ ಎನ್ನುವ ಊಹಾಪೋಹಗಳಿದ್ದವು. ಕೇವಲ ಊಹಾಪೋಹವಾಗಿದ್ದ ಈ ಸುದ್ದಿಯನ್ನ ಸದನದಲ್ಲಿ ಉತ್ತರ ನೀಡುವ ಮೂಲಕ‌ ಉನ್ನತ ಶಿಕ್ಷಣ ಸಚಿವ ಅಶ್ವತ್‌ ನಾರಾಯಣ ನಿಜವಾಗಿಸಿದ್ದಾರೆ. ಸದನದಲ್ಲಿ ವಿಜಯಪುರ ಜಿಲ್ಲೆ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ರಾಜ್ಯದ ಮಹಿಳಾ ಸಮುದಾಯವೇ ಗಾಬರಿಗೊಂಡಿದೆ.

ಹಾಗಿದ್ರೆ ಉನ್ನತ ಶಿಕ್ಷಣ ಸಚಿವರು ನೀಡಿರುವ ಉತ್ತರ ಏನು..!? 

"ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಸಾಮಾನ್ಯ ವಿಶ್ವವಿದ್ಯಾಲಯವನ್ನಾಗಿ ಪುನರ್ ರಚಿಸುವ ಹಾಗೂ ವಿಜಯಪುರ ಜಿಲ್ಲೆಯ ಮೇಲೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯೊಂದಿಗೆ ಸಂಯೋಜನೆಗೊಳಿಸುವ ಸಾಮಾನ್ಯ ವಿಶ್ವ ವಿದ್ಯಾಲಯವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ ಅಂತ ಸದನದಲ್ಲಿ ವಿವಿಯನ್ನ ಕೇವಲ ಜಿಲ್ಲೆಗೆ ಸೀಮಿತಗೊಳಿಸುತ್ತಿರುವ ಬಗ್ಗೆ ಮಾಹಿತಿಯನ್ನ ಸಚಿವ ಅಶ್ವತ್‌ ನಾರಾಯಣ ನೀಡಿದ್ದಾರೆ..

ಮಹಿಳಾ ವಿವಿ ಪರಿವರ್ತನೆ ಸಾಧಕ-ಬಾದಕ ಅಧ್ಯಯನಕ್ಕೆ ಪರಿಷತ್‌ ರಚನೆ..!

ಇನ್ನು ಮಹಿಳಾ ವಿ.ವಿ ಪರಿವರ್ತನೆ ಕುರಿತು ಸಾಧಕ-ಬಾದಕ‌ ಅರಿಯಲು ಅಧ್ಯಯನಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯಿಂದ ಉನ್ನತ ಶಿಕ್ಷಣ ಪರಿಷತ್ ಕೂಡ ರಚನೆ ಮಾಡಲಾಗಿದೆ. ರಾಜ್ಯದ ಪ್ರತಿಷ್ಟಿತ ಶಿಕ್ಷಣ ತಜ್ಞರು, ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಒಳಗೊಂಡ ಶಿಕ್ಷಣ ಪರಿಷತ್ ರಚನೆ ಮಾಡಲಾಗಿದೆ. ಈ ಪರಿಷತ್‌ ಮಹಿಳಾ ವಿ.ವಿ ರದ್ದು ಮಾಡಿದ್ರೆ ಹೇಗೆ? ರದ್ದು ಮಾಡಿದ್ರೆ ಲಾಭ ಏನು? ರದ್ದು ಮಾಡಿದ ಮೇಲೆ ಯಾವ ಮಾದರಿಯಲ್ಲಿ ವಿವಿ ಮುಂದುವರೆಯಬೇಕು ಎಂಬೆಲ್ಲದರ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ಈ ಪರಿಷತ್‌ ವರದಿ ನೀಡಲಿದೆ. ಇದೆ ವರದಿಯನ್ನ ಆಧರಿಸಿ ಸರ್ಕಾರ ಈ ನಿರ್ಧಾರಕ್ಕೆ ಬಂತಾ ಅಥವಾ ಮಹಿಳಾ ವಿವಿಯನ್ನ ರದ್ದು ಮಾಡಲೆಂಡೆ ಇದೊಂದು ಪರಿಷತ್‌ ರಚನೆ ಆಯ್ತಾ ಎನ್ನುವ ಗೊಂದಲ ಈಗ ರಾಜ್ಯದ ಮಹಿಳಾ ವಲಯದಲ್ಲಿ ಮೂಡಿದೆ..

ಮಹಿಳಾ ವಿವಿ ಉಳುವಿಗೆ ವಿರೋಧ ಪಕ್ಷದ ನಾಯಕ ಟ್ವಿಟ್‌ ವಾರ್..!

ಇನ್ನೊಂದೆಡೆ ರಾಜ್ಯ ಅಕ್ಕಮಹಾದೇವಿ ವಿವಿ ರದ್ದತಿಗೆ ಸರ್ಕಾರ ಸಿದ್ಧತೆ ನಡೆಸಿದೆ ಎನ್ನುವ ಊಹಾಪೋಹಗಳು ಎದ್ದಾಗಲೇ ರಾಜ್ಯದಾಧ್ಯಂತ ಮಹಿಳಾ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿತ್ತು. ವಿಜಯಪುರ ಜಿಲ್ಲೆಯಲ್ಲು ಮಹಿಳಾ ವಿವಿ ಉಳುವಿಗಾಗಿ ಸರಣಿ ಸಭೆಗಳು ನಡೆದಿದ್ದವು. ಅಷ್ಟೇ ಯಾಕೆ‌ ಮಹಿಳಾ ವಿ.ವಿ ಉಳಿವಿಗೆ ವಿರೋಧ ಪಕ್ಷದ ನಾಯಕರುಗಳ ಟ್ವಿಟ್ ವಾರ್ ಕೂಡ ನಡೆದಿತ್ತು. ಮಾಜಿ ಸಚಿವ ಎಂ ಬಿ ಪಾಟೀಲ್, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮಹಿಳಾ ವಿ.ವಿ ಉಳುವಿಗೆ ಹೋರಾಡುವ ಎಚ್ಚರಿಕೆಯನ್ನ ಟ್ವೀಟ್‌ ಮೂಲಕ ನೀಡಿದ್ದರು.. ಇಷ್ಟೆಲ್ಲ ವಿರೋಧದ ನಡುವೆಯೂ ಉನ್ನತ ಶಿಕ್ಷಣ ಸಚಿವ ಅಶ್ವತ್‌ ನಾರಾಯಣ ಸರ್ಕಾರದ ಉದ್ದೇಶವನ್ನ ಸದನದಲ್ಲಿ ಜಗಜ್ಜಾಹಿರು ಮಾಡಿದ್ದಾರೆ..

ಡೊಲಿಡಾ ಹಾಡಿಗೆ ಐಫೆಲ್ ಟವರ್ ಮುಂದೆ ಕುಣಿದ ಮಹಿಳೆಯರು

ಡಾ. ಡಿ ಎಂ ನಂಜುಂಡಪ್ಪ ವರದಿ ಆಧರಿಸಿ ಅಸ್ತಿತ್ವಕ್ಕೆ ಬಂದಿದ್ದ ಮಹಿಳಾ ವಿವಿ..!

ಕಳೆದ 2002 ಅಂದ್ರೆ 20 ವರ್ಷಗಳ ಹಿಂದೆ ಡಾ.‌ ಡಿ‌‌ ಎಂ ನಂಜುಂಡಪ್ಪ ವರದಿಯ ಆಧಾರದ ಮೇಲೆ ಎಸ್ ಕೃಷ್ಣಾ ಸಿಎಂ ಸರ್ಕಾರ ಮಹಿಳಾ ವಿ.ವಿ ಸ್ಥಾಪಿಸಿದೆ. ಉತ್ತರ ಕರ್ನಾಟಕದ 13 ಜಿಲ್ಲೆಗಳ ಮಹಿಳಾ‌ ಸಬಲೀಕರಣ, ಮಹಿಳೆಯರ ಉನ್ನತ  ಶಿಕ್ಷಣಕ್ಕಾಗಿ ಮಹಿಳಾ ವಿ.ವಿ ಸ್ಥಾಪನೆಯಾಗಿತ್ತು. 2017 ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಮಹಿಳಾ ವಿ.ವಿ ಹೆಸರನ್ನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ‌ ವಿ.ವಿ ಪರಿವರ್ತಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳ 148 ಮಹಿಳಾ ಕಾಲೇಜುಗಳು ಈ‌ ಅಕ್ಕಮಹಾದೇವಿ ಮಹಿಳಾ ವಿ.ವಿಯಿಂದ ಮಾನ್ಯತೆ ಪಡೆದಿದ್ದವು. ಆದ್ರೀಗ ವಿ.ವಿಯ ರೂಪುರೇಷೆಗಳ ಬದಲಾವಣೆ ಆಗ್ತಿರೋ ಜನಾಕ್ರೋಶಕ್ಕೆ ಕಾರಣವಾಗಿದೆ..!

ಮಹಿಳಾ ವಿವಿ ರೂಪಾಂತರ; ಇದೊಂದು ಕ್ರೆಡಿಟ್‌ ವಾರ್..!?

ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ರೂಪಾಂತರ ಮಾಡ್ತಿರೋದು ಕ್ರೆಡಿಟ್‌ ವಾರ್‌ ಆಗಿದ್ಯಾ ಅನ್ನೋ ಪ್ರಶ್ನೆ ಕೂಡ ಈಗ ಎದುರಾಗಿದೆ. ಯಾಕಂದ್ರೆ 2002 ರಲ್ಲಿ ಮಹಿಳಾ ವಿವಿ ಸ್ಥಾಪನೆಯಾಗುವಾಗ ಕಾಂಗ್ರೆಸ್‌ ಸರ್ಕಾರವಿತ್ತು. 2017 ರಲ್ಲಿ ಮಹಿಳಾ ವಿವಿಯ ಹೆಸ್ರು  ಅಕ್ಕಮಹಾದೇವಿ ಮಹಿಳಾ ವಿವಿ ಅಂತಾ ಮರುನಾಮಕರಣವಾದಾಗಲು ಕಾಂಗ್ರೆಸ್‌ ಸರ್ಕಾರವಿತ್ತು.. ಮಹಿಳಾ ವಿವಿ ಸ್ಥಾಪನೆಯಿಂದ ಇಲ್ಲಿಯವರೆಗು ಕ್ರೆಡಿಟ್‌ ಕಾಂಗ್ರೆಸ್‌ ಪಾಲಾಗಿದೆ ಎನ್ನುವ ಮಾತಿದೆ. ಹೀಗಾಗಿ ಕಾಂಗ್ರೆಸ್‌ ಸಿಕ್ಕಿರೋ ಕ್ರೆಡಿಟ್‌ ಕಸಿಯಲು ಇದೊಂದು ರೂಪಾಂತರಕ್ಕೆ ಬಿಜೆಪಿ ಸರ್ಕಾರ ಸಿದ್ಧವಾಯ್ತಾ ಅನ್ನೋ ಅನುಮಾನಗಳು ರಾಜಕೀಯ ವಲಯದಲ್ಲಿ ಕೇಳಿ ಬರ್ತಿವೆ.. ಆದ್ರೆ ಹೆಸರು ಹೇಳು ಬಯಸದ ಬಿಜೆಪಿಯ ಎಂ ಎಲ್‌ ಸಿ ಒಬ್ಬರು ಇದೆಲ್ಲ ಕೇವಲ ಊಹಾಪೋಹ ಕ್ರೇಡಿಟ್‌ ಪ್ರಶ್ನೆ ಇಲ್ಲಿ ಬರೊಲ್ಲ ಎಂದಿದ್ದಾರೆ. ಜಿಲ್ಲೆಗೊಂದು ಯುನಿವರ್ಸಿಟಿ ಸ್ಥಾಪಿಸುವ ಸದುದ್ದೇಶ ಬಿಜೆಪಿ ಸರ್ಕಾರದ್ದಾಗಿದೆ. ಅಕ್ಕಮಹಾದೇವಿ ವಿವಿಯನ್ನ ಸಂಪೂರ್ಣ ಮುಚ್ಚೋದು ಅಲ್ಲ ಎಂದಿದ್ದಾರೆ..!