Hijab Row ಹಿಜಾಬ್‌ ಬೇಕೆಂದು ಹಠ ಹಿಡಿಯುವ ವಿದ್ಯಾರ್ಥಿಗಳಿಗೆ ಕಾದಿದೆ ಶಾಕ್

Feb 20, 2022, 7:26 PM IST

ಬೆಂಗಳೂರು(ಫೆ.21): 2021-22 ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ (Practical exam) ಫೆ.21ರಿಂದ ಆರಂಭವಾಗಲಿದ್ದು, ಹಿಜಾಬ್ ಸಂಘರ್ಷದಿಂದ ಕಾಲೇಜಿಗೆ ಹಾಜರಾಗದೇ ದೂರು ಉಳಿದಿರುವ ವಿದ್ಯಾರ್ಥಿನಿಯರಿಗೆ ಬಿಗ್ ಶಾಕ್ ಕಾದಿದೆ. 

ಪಿಯುಸಿ ಪ್ರಾಯೋಗಿಕ ಪರೀಕ್ಷೆ ಆರಂಭ, ಹಿಜಾಬ್ ಕಾರಣದಿಂದ ಗೈರಾದ್ರೆ ಮತ್ತೆ ಅವಕಾಶ ಇಲ್ಲ

ಹಿಜಾಬ್ ಸಂಘರ್ಷದ ನಡುವೆ ರಾಜ್ಯಾದ್ಯಂತ ಸೋಮವಾರದಿಂದ ಪಿಯು ಪ್ರಯೋಗಿಕ ಪರೀಕ್ಷೆಗಳು (Practical exam) ಆರಂಭವಾಗಿದೆ. ಈಗಾಗಲೇ  ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಾಕ್ಟಿಕಲ್ ಪರೀಕ್ಷೆಗೆ ವೇಳಾಪಟ್ಟಿ ನೀಡಿದೆ. ಒಂದೊಮ್ಮೆ ಹಿಜಾಬ್ ಸಂಘರ್ಷದ ಕೋರ್ಟ್ ಆದೇಶದವರೆಗೂ ತರಗತಿಗೆ ಬರುವುದಿಲ್ಲ. ಪರೀಕ್ಷೆ ಹಾಜರಾಗೋದಿಲ್ಲ ಅನ್ನೋವರಿಗೆ ಬಿಗ್ ಶಾಕ್ ಕಾದಿದೆ.

ಹಿಜಾಬ್ ಸಂಘರ್ಷದ ನೆಪ ಹೇಳಿ ಪರೀಕ್ಷೆ ಬರೆಯದೆ ಹೋದರೆ ಮತ್ತೆ ಪ್ರಾಕ್ಟಿಕಲ್ ಪರೀಕ್ಷೆ ಬರೆಯಲು ಅವಕಾಶ ಸಿಗುವುದಿಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಗೆ ಗೈರು ಹಾಜರಾದರೆ ಮತ್ತೊಂದು ಅವಕಾಶ ಸಿಗುವುದಿಲ್ಲ.

ಹೀಗಾಗಿ ಹಿಜಾಬ್ ವಿವಾದದ ನೆಪ ಹೇಳಿ  ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಬರೆಯದಿದ್ದರೆ, ದೂರ ಉಳಿದ ವಿದ್ಯಾರ್ಥಿನಿಯರಿಗೆ ಸಂಕಷ್ಟ ತಪ್ಪಿದ್ದಲ್ಲ. ಪ್ರಾಯೋಗಿಕ ಪರೀಕ್ಷೆ ಮುಗಿಸಲು ಮಾರ್ಚ್ 25ರವರೆಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅವಕಾಶ ನೀಡಿದೆ.