Jan 3, 2022, 11:28 AM IST
ಬೆಂಗಳೂರು (ಜ. 03): ರಾಜ್ಯದ ಮೊದಲ ತೋಟಗಾರಿಕೆ ವಿಶ್ವವಿದ್ಯಾಲಯ (Horticulture University) ಎಂಬ ಹೆಗ್ಗಳಿಕೆ ಹೊಂದಿರೋ ಬಾಗಲಕೋಟೆ (Bagalkot) ತೋಟಗಾರಿಕೆ ವಿಶ್ವವಿದ್ಯಾಲಯ ಇದೀಗ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಕಳೆದ 5 ವರ್ಷದಿಂದ ಮನವಿ ಮಾಡಿದ್ರೂ ಸರ್ಕಾರ ಮತ್ತು ಜನಪ್ರತಿನಿಧಿಗಳು ಮಾತ್ರ ಕ್ಯಾರೆ ಅಂತಿಲ್ಲ.
Covid 19: ವಾರದ ಪಾಸಿಟಿವಿಟಿ ಶೇ. 5 ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್ ಪಕ್ಕಾ.?
ಕಳೆದ 5 ವರ್ಷದಿಂದ ಹೊಸ ನೇಮಕಾತಿಗೆ ಸಿಕ್ತಿಲ್ಲ ಮುಕ್ತಿ,ಮುಳುಗಡೆ ನಗರಿ ಖ್ಯಾತಿಯ ಬಾಗಲಕೋಟೆಯ ನವನಗರದಲ್ಲಿರೋ ತೋಟಗಾರಿಕೆ ವಿಶ್ವವಿದ್ಯಾಲದಯದ ಅಡಿಯಲ್ಲಿ ರಾಜ್ಯದ 8 ಕಡೆಗೆ ಕಾಲೇಜ್‌ಗಳು ನಡೆಯುತ್ತಿವೆ. ಬರೋಬ್ಬರಿ 1400 ಕ್ಕೂ ಅಧಿಕ ಜನ ಭೋದಕ ಭೋದಕೇತರ ಸಿಬ್ಬಂದಿ ಇರಬೇಕಾಗಿದ್ದು, ಇದ್ರಲ್ಲಿ ಶೇಕಡಾ 47 ರಷ್ಟು ಸಿಬ್ಬಂದಿ ಕೊರತೆಯಾಗಿ ಕೇವಲ 700 ಜನ ಸಿಬ್ಬಂದಿ ಮಾತ್ರ ಇದ್ದಾರೆ. ಇದರಿಂದ ಕಾಲೇಜಿನಲ್ಲಿ ಉಪನ್ಯಾಸಕರು ಮತ್ತು ವಿಜ್ಞಾನಿಗಳ ಕೊರತೆ ಎದ್ದು ಕಾಣುತ್ತಿದೆ. ಇನ್ನು ಹೈದ್ರಾಬಾದ್ ಕರ್ನಾಟಕ ಕೋಟಾದಡಿ 110ಕ್ಕೂ ಅಧಿಕ ಸಿಬ್ಬಂದಿ ನೇಮಕವಾಗಬೇಕಿದ್ದು, ಅದೂ ಸಹ ಆಗಿಲ್ಲ, ಇದ್ರಿಂದ ಸತತ 5 ವರ್ಷಗಳಿಂದ ಅನುಮತಿ ಕೇಳುತ್ತಾ ಬಂದ್ರೂ ಸರ್ಕಾರ ಅನುಮತಿ ನೀಡಿಲ್ಲ, ಇದ್ರಿಂದ ತೊಂದರೆಯಾಗಿದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದ್ರೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್ನು ಹೊಸ ನೇಮಕಾತಿ ಇರದೇ ಇರೋದ್ರಿಂದ ವಿಜ್ಞಾನಿಗಳ ಕೊರತೆ ಜೊತೆಗೆ ಹೊಸ ಹೊಸ ವಿಭಾಗಗಳಲ್ಲೂ ಸಮಸ್ಯೆ ಎದುರಿಸುವಂತಾಗಿದೆ. ಇವುಗಳ ಮಧ್ಯೆ ಪ್ರತಿವರ್ಷವೂ ಕೆಲವು ಸಿಬ್ಬಂದಿಗಳೂ ಸಹ ನಿವೃತ್ತಿಯಾಗ್ತಿರೋದ್ರಿಂದ ಅದನ್ನು ನಿಭಾಯಿಸಲು ಇದೀಗ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಇವುಗಳ ಮಧ್ಯೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದು, ಆದ್ರೆ ಆದಷ್ಟು ಬೇಗ ಹೊಸ ನೇಮಕಾತಿಗೆ ಅನುಮತಿ ನೀಡಿದಲ್ಲಿ ಅನುಕೂಲವಾಗುತ್ತೇ, ಈಗಿರೋ ಸಿಬ್ಬಂದಿ ಕೊರತೆಯಿಂದ ತೊಂದರೆಯಾಗ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ.