Jun 1, 2022, 10:05 AM IST
ಬೆಂಗಳೂರು (ಜೂ. 01): ರಾಷ್ಟ್ರಕವಿ ಕುವೆಂಪು (Kuvempu) ಹಾಗೂ ನಾಡಗೀತೆಗೆ ಅವಮಾನ ಮತ್ತು ಪಠ್ಯಪುಸ್ತಕ ಕೇಸರೀಕರಣದ ಆರೋಪದ ವಿರುದ್ಧ ನಡೆದಿರುವ ‘ಪಠ್ಯ ವಾಪಸಿ’ ಬೆಳವಣಿಗೆ ಇದೀಗ ಆಂದೋಲನದ ಸ್ವರೂಪ ಪಡೆದಿದೆ. ಹಿರಿಯ ಸಾಹಿತಿ ಸರಜೂ ಕಾಟ್ಕರ್ ಸೇರಿದಂತೆ ಆರು ಸಾಹಿತಿಗಳು ತಮ್ಮ ರಚನೆಯನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದಾರೆ. ಅದೇ ರೀತಿ ಮತ್ತೊಬ್ಬ ಸಾಹಿತಿ ಪ್ರೊ.ಕೆ.ಎಸ್.ಮಧುಸೂದನ ಅವರು ಒಂಬತ್ತನೇ ತರಗತಿ ಪಠ್ಯ ಪುಸ್ತಕ ರಚನೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಕೃಪಾಪೋಷಿತ ಟೂಲ್‌ಕಿಟ್‌ಗಳ ರಾಜೀನಾಮೆ: ಅಶ್ವತ್ಥ್ ನಾರಾಯಣ್
ಸಾಹಿತಿಗಳು, ಚಿಂತಕರು, ವಿರೋಧ ಪಕ್ಷಗಳು ಸಿಡಿದಿದ್ದಿದ್ದಾರೆ. ಈ ನಡೆ ಸಿಎಂ ಬೊಮ್ಮಯಿಗೆ ತಲೆನೋವು ತಂದಿದೆ. ಪಠ್ಯ ಪರಿಷ್ಕರಣೆ ಒಪ್ಪಿಕೊಳ್ಳದಿದ್ರೆ ಪಕ್ಷದ ಸಿದ್ಧಾಂತ ಮೀರಿ ನಡೆದಂತೆ, ಒಪ್ಪಿಕೊಂಡರೆ ತಮ್ಮ ಸಿದ್ಧಾಂತ ಮೀರಿದಂತೆ, ಹೀಗಾಗಿ ಗೊಂದಲದಲ್ಲಿದ್ದಾರೆ ಸಿಎಂ ಬೊಮ್ಮಾತಿ.