Asianet Suvarna News Asianet Suvarna News

ಕಾಂಗ್ರೆಸ್‌ ಕೃಪಾಪೋಷಿತ ಟೂಲ್‌ಕಿಟ್‌ಗಳ ರಾಜೀನಾಮೆ: ಅಶ್ವತ್ಥ್ ನಾರಾಯಣ್

'ಸುಳ್ಳಿನ ಕಥೆ ಹಣೆಯುವಲ್ಲಿ ಪಳಗಿರುವ ಕಾಂಗ್ರೆಸ್‌ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ. #ToolkitResignation ತಂತ್ರ ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಯಾವುದೇ ಮರುಕವಿಲ್ಲ. ಇವರಿಗೆ ನೂತನ ಪಠ್ಯಕ್ರಮ ಪಥ್ಯವಾಗದ ಮಾತ್ರಕ್ಕೆ ಬದಲಾಯಿಸಲಾಗದು' ಎಂದು ಅಶ್ವತ್ಥ್ ನಾರಾಯಣ್ ಕಿಡಿಕಾಡಿದ್ದಾರೆ. 
 
ಬೆಂಗಳೂರು (ಜೂ. 01):  ರಾಷ್ಟ್ರಕವಿ ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಮತ್ತು ಪಠ್ಯಪುಸ್ತಕ ಕೇಸರೀಕರಣದ ಆರೋಪದ ವಿರುದ್ಧ ನಡೆದಿರುವ ‘ಪಠ್ಯ ವಾಪಸಿ’ ಬೆಳವಣಿಗೆ ಇದೀಗ ಆಂದೋಲನದ ಸ್ವರೂಪ ಪಡೆದಿದೆ. ಹಿರಿಯ ಸಾಹಿತಿ ಸರಜೂ ಕಾಟ್ಕರ್‌ ಸೇರಿದಂತೆ ಆರು ಸಾಹಿತಿಗಳು ತಮ್ಮ ರಚನೆಯನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಮಂಗಳವಾರ ಹಿಂಪಡೆದಿದ್ದಾರೆ. ಅದೇ ರೀತಿ ಮತ್ತೊಬ್ಬ ಸಾಹಿತಿ ಪ್ರೊ.ಕೆ.ಎಸ್‌.ಮಧುಸೂದನ ಅವರು ಒಂಬತ್ತನೇ ತರಗತಿ ಪಠ್ಯ ಪುಸ್ತಕ ರಚನೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪರಿಷ್ಕರಣಾ ಗೊಂದಲ: ಹಿಂದುತ್ವ-ವಿರೋಧ, ಧರ್ಮಸಂಕಟದಲ್ಲಿ ಸಿಎಂ ಬೊಮ್ಮಾಯಿ

'ಸುಳ್ಳಿನ ಕಥೆ ಹಣೆಯುವಲ್ಲಿ ಪಳಗಿರುವ ಕಾಂಗ್ರೆಸ್‌ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ. #ToolkitResignation ತಂತ್ರ ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಯಾವುದೇ ಮರುಕವಿಲ್ಲ. ಇವರಿಗೆ ನೂತನ ಪಠ್ಯಕ್ರಮ ಪಥ್ಯವಾಗದ ಮಾತ್ರಕ್ಕೆ ಬದಲಾಯಿಸಲಾಗದು' ಎಂದು ಅಶ್ವತ್ಥ್ ನಾರಾಯಣ್ ಕಿಡಿಕಾಡಿದ್ದಾರೆ. 

ಕಾಮಾಲೆ ಕಣ್ಣಿನವರಿಗೆ ಜಗತ್ತೆಲ್ಲ ಹಳದಿ. ತುಷ್ಟೀಕರಣ, ತುಚ್ಛೀಕರಣಗಳಲ್ಲೇ ಮುಳುಗಿರುವವರ ಯೋಗ್ಯತೆಯೂ ಇಷ್ಟೇ. ಬಿಜೆಪಿ ಸರ್ಕಾರಕ್ಕೆಇಂತಹ ಮುಲಾಜುಗಳಿಲ್ಲ. ಸತ್ಯವನ್ನು ಎತ್ತಿ ಹಿಡಿಯುವುದು ಮತ್ತು ಅದನ್ನು ಮಕ್ಕಳಿಗೆ ಕಲಿಸುವುದು ನಮ್ಮ ಸಂಕಲ್ಪ. #ToolkitResignation ಕೆಲಸವನ್ನು ಕಾಂಗ್ರೆಸ್ ಮುಂದುವರೆಸಲಿ' ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.