Feb 17, 2022, 3:20 PM IST
ಶಿವಮೊಗ್ಗ, (ಫೆ.17): ಉಡುಪಿಯಲ್ಲಿ ಆರಂಭವಾದ ಸಮವಸ್ತ್ರ (Uniform) ಸಮರ ಚರ್ಚೆ ಇಡೀ ದೇಶದಾದ್ಯಂತ ವ್ಯಾಪಿಸಿದೆ. ಹಿಜಾಬ್ ನಮ್ಮ ಹಕ್ಕು ಅಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಹಿಜಾಬ್ ಧರಿಸುವವರೆಗೂ ಕೇಸರಿ ಶಾಲು ಧರಿಸುತ್ತೇವೆ ಅಂತ ವಿದ್ಯಾರ್ಥಿಗಳು ಪಟ್ಟು ಬಿದ್ದಿದ್ದಾರೆ. ನಿನ್ನೆಯಿಂದ (ಫೆ.16) ಆರಂಭವಾದ ಕಾಲೇಜುಗಳಿಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಹಿಜಾಬ್ ಬಿಡಲ್ಲ ಅಂತ ಕೆಲ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ಶಿವಮೊಗ್ಗದಲ್ಲಿ ಈ ಹಿಜಾಬ್ ಸಂಘರ್ಷ ಇಂದು (ಗುರುವಾರ) ಸಹ ಮುಂದುವರಿದಿದೆ.
Hijab Row ಸಂಯಮ ಕಾಯ್ದುಕೊಂಡ ಕೇಸರಿ ಪಡೆ, ಪಟ್ಟು ಸಡಿಲಿಸದ ಹಿಜಾಬ್ ಧಾರಿಗಳು
ಅದರಲ್ಲೂ ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಈ ಹಿಜಾಬ್ ಕಿಚ್ಚು ತಾರಕಕ್ಕೇರಿದ್ದು, ಕಾಲೇಜಿನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಹೋಗಿದೆ.
ಯಾವುದೇ ಧರ್ಮದ ಸಂಕೇತವನ್ನು ಶಾಲಾ-ಕಾಲೇಜಿನಿಲ್ಲಿ ಧರಿಸುವಂತಿಲ್ಲ ಎಂದ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಅಂತಿಮವಾಗಿ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಇಡೀ ರಾಜ್ಯ ಕಾದು ಕುಳಿತಿದೆ. ಆದ್ರೆ, ಇತ್ತ ಹಿಜಾಬ್‌ಗೆ ಅವಕಾಶ ಕೊಡಿ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.