Mar 12, 2022, 11:03 AM IST
ಕುಂದಾಪುರ(ಮಾ.12): ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ಆಟಿಕೆಯ ತದ್ರೂಪಿ ಕೆಎಸ್ಆರ್‌ಟಿಸಿ ಬಸ್ ಮಾದರಿ ತಯಾರಿಸಿ ಸಾರಿಗೆ ಸಚಿವರ ಗಮನ ಸೆಳೆದು, ಅವರಿಂದಲೇ ಗುಜರಿ ಸೇರುವ ಬಸ್ ಉಚಿತವಾಗಿ ಪಡೆದಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಗ್ವಾಡಿಯ ಕಲಾವಿದ ಪ್ರಶಾಂತ್ ಆಚಾರ್ ಅವರ ಸರ್ಕಾರಿ ಶಾಲೆ ಉಳಿಸಿ ಅಭಿಯಾನದ ಕನಸು ನನಸಾದ ಸಂಗತಿ. ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಪ್ರಶಾಂತ್ ಆಚಾರ್ ಅವರ ಕಲಾ ಪ್ರತಿಭೆ ಹಾಗೂ ಶಾಲೆ ಉಳಿಸುವ ಕನಸಿಗೆ ರಾಜ್ಯಮಟ್ಟದಲ್ಲಿ ಪ್ರಚಾರ ಸಿಕ್ಕಿದ್ದು, ಇದರ ಪರಿಣಾಮವಾಗಿ ಸಚಿವರಿಂದ ಉಚಿತವಾಗಿ ಪಡೆದಿದ್ದ ಬಸ್ ಅನ್ನು ಮರು ವಿನ್ಯಾಸಗೊಳಿಸಿ ತಾವು ಕಲಿತ ಬಗ್ವಾಡಿ ಸರ್ಕಾರಿ ಶಾಲೆಯ ಸ್ಮಾರ್ಟ್ ತರಗತಿಯಾಗಿ ಆಚಾರ್ ಬದಲಾಯಿಸಿದ್ದಾಾರೆ. ಬಗ್ವಾಡಿಯ ಈ ಹಳ್ಳಿಹೈದನ ಕನ್ನಡ ಶಾಲೆ ಉಳಿಸಿ ಅಭಿಯಾನ ಶಿಕ್ಷಣಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಕೆಎಸ್ಆರ್‌ಟಿಸಿ ತದ್ರೂಪಿ ಬಸ್ ಮಾದರಿಗಳನ್ನು ರಚಿಸಿ ಸುದ್ದಿಯಾದ ಬಗ್ವಾಡಿ ನಿವಾಸಿಗಳಾದ ಪ್ರಶಾಂತ್ ಆಚಾರ್ ಹಾಗೂ ಅವರ ಸಹೋದರ ಪ್ರಕಾಶ್ ಆಚಾರ್ ನೇರವಾಗಿ ಸಾರಿಗೆ ಸಚಿವರನ್ನು ಭೇಟಿಯಾಗಿ ಸ್ಕ್ರಾಾಪ್ ಬಸ್ನಲ್ಲಿ ಸ್ಮಾಾರ್ಟ್ ತರಗತಿ ಮಾಡುವ ಕುರಿತು ಬೇಡಿಕೆ ಇಟ್ಟಿದ್ದರು. ಕಲಾವಿದನ ಬೇಡಿಕೆಗೆ ಸ್ಪಂದಿಸಿದ್ದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಕೇವಲ 15 ದಿನದೊಳಗೆ ಬಗ್ವಾಾಡಿ ಸರ್ಕಾರಿ ಶಾಲೆಗೆ ಕೆಎಸ್ಆರ್ಟಿಸಿ ಸ್ಕ್ರಾಪ್ ಬಸ್ ಅನ್ನು ಉಚಿತವಾಗಿ ನೀಡಿದ್ದರು. ಸ್ವತಃ ಕಲಾವಿದ ಪ್ರಶಾಂತ್ ಆಚಾರ್ ಹಾಗೂ ಅವರ ಸಹೋದರ ಪ್ರಕಾಶ್ ಆಚಾರ್ ಬಿಡುವಿನ ವೇಳೆಯಲ್ಲಿ ಕೆಎಸ್ಆರ್ಟಿಸಿ ಬಸ್ ಅನ್ನು ಸ್ಮಾಾರ್ಟ್ ತರಗತಿಯಾಗಿ ನವೀಕರಣಗೊಳಿಸಿ ಇದೀಗ ಬಸ್ಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.
James 2022: ಅಪ್ಪು ಚಿತ್ರದ ಜಾತ್ರೆಗೆ ಜೋಶ್ ತುಂಬಿದ ಸಲಾಂ ಸೋಲ್ಜರ್ ಸಾಂಗ್!
ಕೆಎಸ್ಆರ್ಟಿಸಿ ಬಸ್ ತರಗತಿಯಲ್ಲಿ 25 ವಿದ್ಯಾರ್ಥಿಗಳು ಕೂತು ಕೇಳಬಹುದಾದ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಪ್ರಾಾಜೆಕ್ಟರ್ ವ್ಯವಸ್ಥೆ, ಬಸ್ ಒಳಗಿನ ಸುತ್ತಲಿನ ಬದಿಯ ಮೇಲ್ಬಾಾಗದ ಗಾಜಿಗೆ ಸುತ್ತಲೂ ಸ್ವಾಾತಂತ್ರ್ಯ ಹೋರಾಟಗಾರರ, ಸಮಾಜ ಸುಧಾರಕರ, ಸಾಹಿತಿಗಳ ಚಿತ್ರಗಳನ್ನು ಅಳವಡಿಸಲಾಗಿದೆ. ಬಸ್ನೊಳಗೆ ಗ್ರಂಥಾಲಯದ ವ್ಯವಸ್ಥೆ ಮಾಡಲಾಗಿದ್ದು, ಬಸ್ನೊಳಗಿರುವ ಚಿತ್ರಗಳಲ್ಲಿರುವವರ ಕುರಿತು ವಿದ್ಯಾರ್ಥಿಗಳಿಗೆ ಏನಾದರೂ ಪ್ರಶ್ನೆಗಳು, ಸಂದೇಹಗಳಿದ್ದರೆ ಅವರ ಕುರಿತಾದ ಪುಸ್ತಕಗಳನ್ನು ಇದೇ ಗ್ರಂಥಾಲಯದೊಳಗೆ ಇರಿಸಲಾಗಿದ್ದು ವಿದ್ಯಾಾರ್ಥಿಗಳು ಅದರಲ್ಲಿ ಉತ್ತರಗಳನ್ನು ಕಂಡುಕೊಳ್ಳಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕು ಫ್ಯಾನ್ಗಳನ್ನು ಅಳವಡಿಸಲಾಗಿದ್ದು, ಗಾಳಿಯ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ವಾಶ್ ಬೇಸಿನ್ ವ್ಯವಸ್ಥೆ ಇದೆ. ಇನ್ನು ಬಸ್ನ ಮುಂಭಾಗ ಅದರ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿದ್ದು, ಸ್ಟೇರಿಂಗ್ ಚಾಲಕರ ಸೀಟನ್ನು ಹಾಗೆಯೇ ಬಿಡಲಾಗಿದೆ. ಅಲ್ಲಿ ಉಳಿದ ಅಷ್ಟಿಟ್ಟು ಜಾಗವನ್ನು ಸ್ಟೋರೇಜ್ ಕೋಣೆಯಾಗಿ ಪರಿವರ್ತಿಸಿಕೊಳ್ಳಾಾಗಿದೆ. ಇದಕ್ಕೆ ಪ್ರಾಜೆಕ್ಟರ್ ಕೋಣೆಯಿಂದಲೇ ಬಾಗಿಲ ವ್ಯವಸ್ಥೆ ಮಾಡಿಕೊಡಲಾಗಿದೆ.
ಬಸ್ ಹೊರಭಾಗದ ಒಂದು ಬದಿಯಲ್ಲಿ ಶಿಕ್ಷಣ ಪದ್ದತಿಯ ಕುರಿತು ಚಿತ್ರಗಳನ್ನು ರಚಿಸಲಾಗಿದೆ. ಇನ್ನೊೊಂದು ಬದಿಯಲ್ಲಿ ಕರಾವಳಿಯ ವಿಶೇಷ, ರಥೋತ್ಸವ, ಯಕ್ಷಗಾನ, ಕೋಲ ಮುಂತಾದ ಚಿತ್ರಗಳನ್ನು ಬಿಡಿಸಲಾಗಿದೆ. ಹೊರಗಿನ ಮೇಲ್ಭಾಾಗದ ಬದಿಯ ಗಾಜಿನ ಮೇಲೆ ಪ್ರಶಾಂತ್ ಆಚಾರ್ ತಯಾರಿದ ಬಸ್ ಮಾದರಿ, ಸಚಿವರನ್ನು, ಅಧಿಕಾರಿಗಳನ್ನು ಭೇಟಿಯಾದ ಹಾಗೂ ಕನ್ನಡಪ್ರಭ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಚಿತ್ರಗಳನ್ನು ಅಂಟಿಸಲಾಗಿದೆ. ಬಸ್ ಹೇಗೆ ಬಗ್ವಾಡಿಗೆ ಬಂತು ಎನ್ನುವುದು ಸಂಪೂರ್ಣ ಚಿತ್ರಣವನ್ನು ಇಲ್ಲಿ ಕಟ್ಟಿ ಕೊಡಲಾಗಿದೆ.
ಆಚಾರ್ ಸಹೋದರರ ಈ ಹೊಸ ಕಲ್ಪನೆಗೆ ಹಳೆ ವಿದ್ಯಾಾರ್ಥಿಗಳು, ಊರ ದಾನಿಗಳು, ಶಿಕ್ಷಣ ಪ್ರೇಮಿಗಳು ಆರ್ಥಿಕವಾಗಿ ಸಹಾಯ ಮಾಡಿದ್ದಾಾರೆ. ಫ್ಲೈವುಡ್ ಕೆಲಸ, ಮ್ಯಾಟ್ ಜೋಡಣೆ ಬಹುತೇಕ ಕೆಲಸಗಳನ್ನು ಆಚಾರ್ ಸಹೋದರರಿಬ್ಬರೆ ಉಚಿತವಾಗಿ ಕೆಲಸ ಮಾಡಿದ್ದರಿಂದ ಸ್ಮಾರ್ಟ್ ತರಗತಿಗೆ ಒಟ್ಟು ಎರಡು ಲಕ್ಷದ ವರೆಗೆ ಖರ್ಚಾಗಿದೆ. ವಿನೂತನ ಮಾದರಿಯ ಸ್ಮಾಾರ್ಟ್ ಕ್ಲಾಾಸ್ ಉದ್ಘಾಟನೆ ಇಂದು(ಶನಿವಾರ) ನಡೆಯಲಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವ ಎಸ್ ಅಂಗಾರ ಬಸ್ ಅನ್ನು ಉದ್ಘಾಟಿಸಲಿದ್ದಾರೆ.
ಒಟ್ಟಿನಲ್ಲಿ ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ಬಳಗದ ಮೂಲಕ ರಾಜ್ಯದ ಸಾರಿಗೆ ಸಚಿವರ ಗಮನ ಸೆಳೆದು, ಅವರಿಂದಲೇ ಹಳೆ ಬಸ್ ಪಡೆದು ಹುಟ್ಟೂರು ಶಾಲೆಯ ಮೌಲ್ಯವರ್ಧಿಸುವ ಆಚಾರ್ ಸಹೋದರರ ಛಲಕ್ಕೆ ಶಹಬ್ಬಾಸ್ ಹೇಳಲೇಬೇಕು.