NO Need To Close Karnataka Schools: ಶಾಲೆ ಬಂದ್ ಮಾಡುವ ಅಗತ್ಯವಿಲ್ಲ ಎಂದ ತಜ್ಞರು

Jan 17, 2022, 4:40 PM IST

ಬೆಂಗಳೂರು(ಜ.17): ಕೊರೊನಾ (Corona) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವರು ಮಕ್ಕಳ ಹಿತದೃಷ್ಟಯಿಂದ ಶಾಲೆ ಬಂದ್ ಮಾಡುವುದು ಒಳಿತು ಎಂದು ಹೇಳುತ್ತಿದ್ರೆ, ಇನ್ನೂ ಕೆಲವರು ಶಾಲೆ (School) ಬಂದ್ ಮಾಡುವುದು ಬೇಡ ಅಭಿಪ್ರಾಯವಿತ್ತು. ಇದೀಗ ರಾಜ್ಯಾದ್ಯಂತ ಶಾಲೆ - ಕಾಲೇಜುಗಳನ್ನು ಬಂದ್ ಮಾಡುವುದು ಬೇಡ ಎಂಬ ಅಭಿಪ್ರಾಯಕ್ಕೆ ತಜ್ಞರು ಬಂದಿದ್ದಾರೆ.  ಸೋಂಕು ಹೆಚ್ಚಿರುವಂತಹ ಪ್ರದೇಶಗಳಲ್ಲಿ ಅಂದರೆ ಕ್ಲಸ್ಟರ್ ಮಟ್ಟದಲ್ಲಿ ಮಾತ್ರ ಶಾಲೆಗಳಿಗೆ ರಜೆ ಕೊಡಬೇಕೇ ಹೊರತು ಇಡೀ ಜಿಲ್ಲೆ ರಜೆ ಕೊಡುವುದು ಬೇಡ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. 

KARNATAKA SANSKRIT UNIVERSITY OPPOSITION: #SAYNOTOSANSKRIT ಅಭಿಯಾನಕ್ಕೆ ವ್ಯಾಪಕ ಖಂಡನೆ

ನಿರಂತರ ರಜೆಯಿಂದ ಮಕ್ಕಳಲ್ಲಿ ಕಲಿಕಾ ಕೊರತೆ ಹೆಚ್ಚಾಗುತ್ತಿದೆ. ಹೀಗಾಗಿ ಸೋಂಕು ಹೆಚ್ಚಿರುವಲ್ಲಿ ಕ್ಲಸ್ಟರ್ ಮಟ್ಟದಲ್ಲಿ ರಜೆ ಕೊಡಲು ತೀರ್ಮಾನಿಸಲಾಗಿದೆ. ಖಾಸಗಿ ಶಾಲೆಗಳ ಒಕ್ಕೂಟ ಕೂಡ  ಶಾಲೆ ಬಂದ್ ಮಾಡುವುದು ಬೇಡ ಎಂಬ ಮನವಿಯನ್ನು ಮಾಡಿಕೊಳ್ಳುತ್ತಿತ್ತು.  ಇದರ ಬೆನ್ನಲ್ಲೇ ರಾಜ್ಯದಲ್ಲಿ ಸಾಲೆ ಬಂದ್ ಬೇಡ ಎಂಬ ತೀರ್ಮಾನಕ್ಕೆ ತಜ್ಞರು ಕೂಡ ಬಂದಿದ್ದಾರೆ.  ಹೀಗಾಗಿ ರಾಜ್ಯದಲ್ಲಿನ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಯಥಾರೀತಿ ಮುಂದುವರೆಸುವುದು ಹಾಗೂ ಕೋವಿಡ್ ಸೋಂಕು ಕಂಡುಬಂದಂತಹ ಶಾಲೆಗಳನ್ನು ಮಾತ್ರ ಮುಚ್ಚಲು ತೀರ್ಮಾನಿಸಲಾಗಿದೆ.