Belagavi: ಅಧಿಕಾರಿಗಳ ನಿರ್ಲಕ್ಷ್ಯ, 15 ದಿನಗಳಿಂದ ಬಿಸಿಯೂಟ ಬಂದ್, ಪೋಷಕರಿಂದ ಹಿಡಿಶಾಪ!

Mar 13, 2022, 10:02 AM IST

ಬೆಳಗಾವಿ (ಮಾ. 12): ಅಕ್ಷರದಾಸೋಹದ ಅಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಚಿಕ್ಕೋಡಿಯ ಜೋಡಕುರುಳಿ ಸರ್ಕಾರಿ ಶಾಲೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಿಸಿಯೂಟ ಬಂದ್ ಆಗಿದೆ. ಮನೆಯಿಂದಲೇ ಮಕ್ಕಳು ಊಟದ ಡಬ್ಬಿ ತಂದು ಊಟ ಮಾಡುತ್ತಿದ್ದಾರೆ. ಸುಮಾರು 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, 15 ದಿನಗಳಿಂದ ಅಕ್ಕಿ ಪೂರೈಕೆಯಾಗಿಲ್ಲ. ದಾಸ್ತಾನು ಕೊರತೆ ಬಗ್ಗೆ ಇಲಾಖೆ ಗಮನಕ್ಕೆ ಬಂದರೂ, ಜಾಣ ಕುರುಡು ತೋರಿಸುತ್ತಿದ್ದಾರೆ ಎಂದು ಸ್ಥಳಿಯರು ಹಿಡಿಶಾಪ ಹಾಕಿದ್ದಾರೆ. 

BMTC: ಬಸ್ ಸ್ಲೋ ಓಡಿಸಿದ್ರೂ ನೋಟಿಸ್, ಸ್ಪೀಡಾಗಿ ಹೋದ್ರೆ ಬ್ರೇಕ್ ಬೀಳಲ್ಲ: ಸಿಬ್ಬಂದಿ ಗೋಳು ಕೇಳೋರಿಲ್ಲ!