ರೋಹಿತ್ ಚಕ್ರತೀರ್ಥರನ್ನು ಸರ್ಕಾರ ವಜಾ ಮಾಡಬೇಕು: ನಾರಾಯಣ ಗೌಡ

May 26, 2022, 10:51 AM IST

ಬೆಂಗಳೂರು (ಮೇ. 26): ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಜಟಾಪಟಿ ಮುಂದುವರೆದಿದೆ. ರೋಹಿತ್ ಚಕ್ರತೀರ್ಥ ವಿರುದ್ಧ ನಾರಾಯಣ ಗೌಡ ಕಿಡಿ ಕಾರಿದ್ದಾರೆ. ಪಠ್ಯಪುಸ್ತಕದ ಅಧ್ಯಕ್ಷ ಸಮಿತಿಗೆ ರೋಹಿತ್ ಚಕ್ರತೀರ್ಥ ದೊಡ್ಡ ಕಳಂಕ. ರೋಹಿತ್ ಚಕ್ರತೀರ್ಥ ಕೊಳಕು ಮನಸ್ಸಿನ ಮನುಷ್ಯ. ಇಂಥವರು ಸಮಿತಿಯಲ್ಲಿದ್ದರೆ ಮಕ್ಕಳ ಭವಿಷ್ಯ ಹಾಳು. ಅವರನ್ನು ವಜಾ ಮಾಡಬೇಕು. ಇಸಾಹಿತಿ, ಶಿಕ್ಷಣ ತಜ್ಞರ ಹೊಸ ಸಮಿತಿಯನ್ನು ಮಾಡಬೇಕು ಎಂದು ಕರವೇ ನಾರಾಯಣ ಗವಡ ಒತ್ತಾಯಿಸಿದ್ದಾರೆ. 

ಪಠ್ಯ ಪರಿಷ್ಕರಣೆಗೆ ಸಾಹಿತಿಗಳ ವಿರೋಧ, ಹಿಂದಿನ ಪಠ್ಯವನ್ನೇ ಮುಂದುವರೆಸಲು ಆಗ್ರಹ