Karnataka History Textbook Revise ಟಿಪ್ಪು, ಶಿವಾಜಿ ವೈಭವೀಕರಣಕ್ಕೂ ಕತ್ತರಿ!

Mar 26, 2022, 3:54 PM IST

ಬೆಂಗಳೂರು(ಮಾ.26):ಇಷ್ಟು ದಿನ ಓದಿದ ಇತಿಹಾಸವೇ ಬೇರೆ , ಇನ್ಮುಂದೆ ಓದುವ ಇತಿಹಾಸ (History) ಬೇರೆ. ಇತಿಹಾಸ ಪಠ್ಯಪುಸ್ತಕದಲ್ಲಿನ ವೈಭವೀಕರಣಕ್ಕೆ ಕತ್ತರಿ ಹಾಕಲು ಸರಕಾರ ಚಿಂತನೆ ನಡೆಸಿದೆ.  ಇತಿಹಾಸ ಪಠ್ಯಪುಸ್ತಕದಲ್ಲಿ ಭಾರೀ ಬದಲಾವಣೆಗೆ ನಿರ್ಧರಿಸಲಾಗಿದೆ. ರಾಜ ಮಹಾರಾಜರ ವೈಭವೀಕರಣಕ್ಕೆ ಕತ್ತರಿ ಹಾಕಲು ಚಿಂತಿಸಿದ್ದು, ಟಿಪ್ಪು ಸುಲ್ತಾನ್ (Tipu Sultan) ವೈಭವೀಕರಣ, ಮಾತ್ರವಲ್ಲ ಶಿವಾಜಿ ವೈಭವೀಕರಣಕ್ಕೂ ಕತ್ತರಿ ಬೀಳಲಿದೆ ಎಂದು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ  ರೋಹಿತ್ ಚಕ್ರತೀರ್ಥ (Rohith Chakrathirtha) ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇತಿಹಾಸ ಪಠ್ಯ ಪರಿಷ್ಕರಣೆಗೆ ರಿಜ್ವಾನ್ ಅರ್ಷದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.  ಮಾತ್ರವಲ್ಲ ಕಾಂಗ್ರೆಸ್ ಕೂಡ ಇದನ್ನು ವಿರೋಧಿಸಿದೆ.

ಮದರಸಗಳಲ್ಲಿ ದೇಶದ್ರೋಹ ಪಾಠ ಮಾಡಲಾಗುತ್ತಿದೆ: ರೇಣುಕಾಚಾರ್ಯ

ಟಿಪ್ಪು ಇತಿಹಾಸ ಪಠ್ಯದಿಂದ ಕೈಬಿಡುವ ಸುದ್ದಿ ಸತ್ಯಕ್ಕೆ ದೂರ. ಇತಿಹಾಸದ ಕೆಲ ವಿಚಾರಗಳು ಪಠ್ಯ ಪುಸ್ತಕದಲ್ಲಿ ಕಡೆಗಣನೆ ಮಾಡಲಾಗಿತ್ತು. ಕಡೆಗಣಿಸಿದ ವಿಷಯವನ್ನು ಪರಿಚಯಿಸಲು ಪ್ರಯತ್ನಿಸ್ತಿದ್ದೇವೆ. ಇತಿಹಾಸವನ್ನು ತಿರುಚಲು ಯತ್ನಿಸಿದ್ದನ್ನ ಸರಿಪಡಿಸುತ್ತೇವೆ. ಪಠ್ಯದಲ್ಲಿ ಯಾವುದೇ ರಾಜಕೀಯ ಬೆರೆಸುವ ಕೆಲಸ ಮಾಡಿಲ್ಲ ಎಂದು  ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿಕೆ ನೀಡಿದ್ದಾರೆ.