Mar 30, 2022, 4:13 PM IST
ಮಂಗಳೂರು(ಮಾ.30): ಭಾರೀ ಪ್ರತಿಭಟನೆಯ ಮಧ್ಯೆಯೇ ಮಂಗಳೂರು ವಿಶ್ವವಿದ್ಯಾಲಯದ (Mangalore University) ವಿದ್ಯಾರ್ಥಿ ಪರಿಷತ್ ಅನ್ನು ಆರ್‌ಎಸ್ಎಸ್ (RSS) ಮುಖಂಡ ಕಲ್ಕಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಉದ್ಘಾಟನೆ ಮಾಡಿದ್ದಾರೆ. ವಿವಿಯ ಪಿಜಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಕಲ್ಕಡ್ಕ ಪ್ರಭಾಕರ್ ಭಟ್ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (campus front of india) ವಿರೋಧದಿಸಿತ್ತು.
ಪರೀಕ್ಷೆ ಬರೆಯಲು ಹೊರಟ ವಿಜಯಪುರ ವಿದ್ಯಾರ್ಥಿಗೆ ತಿಥಿ ಮಾಡಿ ಕಿಡಿಗೇಡಿಗಳ ಕಾಟ!
ಕಲ್ಲಡ್ಕ ಪ್ರಭಾಕರ್ ಭಟ್ ಕೋಮು ಪ್ರಚೋದನಾಕಾರಿ ಭಾಷಣಕಾರ, ಮುಸ್ಲಿಂ ವಿರೋಧಿ ಎಂದು ಸಿಎಫ್ಐ ಹೇಳಿದೆ. ವಿವಿಯ ಒಳಗಡೆ ಪ್ರಭಾಕರ್ ಭಟ್ ಕಾರ್ಯಕ್ರಮ ಉದ್ಘಾಟಿಸಿದ್ರೆ ಹೊರಗಡೆ ಸಿಎಫ್ಐ ಪ್ರತಿಭಟನೆ ಮುಗಿಲು ಮುಟ್ಟಿತ್ತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಮಂಗಳೂರು ವಿವಿ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.