Jul 19, 2021, 3:46 PM IST
ಶಿವಮೊಗ್ಗ(ಜು.19): ಹಾವು ಕಚ್ಚಿ ಕೊಳೆಯುವ ಸ್ಥಿತಿಯಲ್ಲಿದ್ದರೂ ವಿದ್ಯಾರ್ಥಿಯೊಬ್ಬ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಹೋಬಳಿಯ ಪರೀಕ್ಷಾ ಕೇಂದ್ರದಲ್ಲಿ ಇಂದು(ಸೋಮವಾರ) ನಡೆದಿದೆ. ಒಂದೂವರೆ ತಿಂಗಳ ಹಿಂದೆ ಕೊಳಕಮಂಡಲ ಹಾವು ಕಚ್ಚಿತ್ತು, ಕಾಲು ಕೊಳೆತು ಹೋಗುತ್ತಿದ್ದರೂ ಕೂಡ ಸ್ಕಂದನ ಬಿ. ಎಂಬ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾನೆ.