ಮಂಗಳೂರು: SSLC ಪರೀಕ್ಷಾ ಕೇಂದ್ರದ ಲ್ಯಾಬ್‌ನಲ್ಲಿ ಅಗ್ನಿ ಆಕಸ್ಮಿಕ

* ಹಿರಾ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಘಟನೆ 
* ಬೇರೆ ಕೊಠಡಿಗೆ ವಿದ್ಯಾರ್ಥಿಗಳು ಶಿಫ್ಟ್‌
* ಕೆಲಕಾಲ ಆತಂಕದ ವಾತಾವರಣ ನಿರ್ಮಾಣ 

First Published Jul 19, 2021, 3:28 PM IST | Last Updated Jul 19, 2021, 3:28 PM IST

ಮಂಗಳೂರು(ಜು.19): ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಲ್ಯಾಬ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಗರದ ಹೊರವಲಯದ ಬಬ್ಬುಕಟ್ಟೆಯ ಖಾಸಗಿ ಕಾಲೇಜಿನಲ್ಲಿ ಇಂದು(ಸೋಮವಾರ) ನಡೆದಿದೆ. ಹಿರಾ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಘಟನೆ ನಡೆದಿದೆ. ಪರೀಕ್ಷೆ ಆರಂಭದ ಅರ್ಧ ಗಂಟೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಇದೇ ಕಾಲೇಜಿನಲ್ಲಿ 300 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಬೆಂಕಿ ಕಾಣಿಸಿಕೊಂಡ ಲ್ಯಾಬ್‌ನ ಸಮೀಪದ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳನ್ನ ಬೇರೆ ಕೊಠಡಿಗೆ ಶಿಫ್ಟ್‌ ಮಾಡಲಾಗಿದೆ. 

ಜು. 26 ರಂದು ಯಡಿಯೂರಪ್ಪ ರಾಜೀನಾಮೆ ಘೋಷಣೆ ಸಾಧ್ಯತೆ..?

Video Top Stories