Belagavi Hijab Row: ಹಿಜಾಬ್​ಗೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು, ಬೆಳಗಾವಿ ಕಾಲೇಜ್‌ ಅನಿರ್ದಿಷ್ಟಾವಧಿ ಬಂದ್

Feb 19, 2022, 12:59 PM IST

ಬೆಳಗಾವಿ(ಫೆ.19): ಜಿಲ್ಲೆಯ ವಿಜಯ ಪ್ಯಾರಾ ಮೆಡಿಕಲ್ ಕಾಲೇಜಿನ (Vijaya Para Medical College) ವಿದ್ಯಾರ್ಥಿಗಳು ಹಿಜಾಬ್​ಗೆ  (Hijab) ಪಟ್ಟು ಹಿಡಿದ ಕಾರಣದಿಂದಾಗಿ ಮುಂದಿನ ಆದೇಶದವರೆಗೆ ಅನಿರ್ದಿಷ್ಟಾವಧಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ  ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದ್ದು, ಎಷ್ಟು ದಿನ ರಜೆ ನೀಡಬೇಕೆಂದು ಡಿಸಿ, ಪೊಲೀಸ್ ಆಫೀಸರ್‌ ಜೊತೆ ಚರ್ಚೆ ನಡೆಸುತ್ತೇನೆ. ಯಾವ ವಿದ್ಯಾರ್ಥಿಗೂ ತೊಂದರೆಯಾಗಬಾದು ಎಂಬ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ.

HIJAB ROW: ಹಿಜಾಬ್ ತೆಗೆದು ಕ್ಲಾಸ್‌ಗೆ ಹೋಗಿ, ಶಾಂತಿ ಮಂತ್ರ ಜಪಿಸಿದ ಅಂಜುಮನ್ ಸಂಸ್ಥೆ

ಕಾಲೇಜು ಮರಳಿ ಪ್ರಾರಂಭವಾದ ಬಳಿಕ ಹೆಚ್ಚುವರಿ ತರಗತಿ ತಗೆದುಕೊಳ್ಳುತ್ತೇವೆ. ಸದ್ಯ ಯಾವ ಮಕ್ಕಳಿಗೂ ತೊಂದರೆಯಾಗಬಾರದು ಎಂದಿದ್ದಾರೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿದ್ದರು.  ಇದಕ್ಕೆ ಪ್ರಾಂಶುಪಾಲರು ತರಗತಿ ನಡೆಯುವಾಗ ಹಿಜಾಬ್ ಧಾರಣೆಗೆ ಅವಕಾಶ ಇಲ್ಲ. ಹಿಜಾಬ್ ತೆಗೆದು ತರಗತಿಗೆ ಹಾಜರಾಗಿ ಎಂದು ಮನವಿ ಮಾಡಿದರು.  ಇದಕ್ಕೆ  ವಿದ್ಯಾರ್ಥಿನಿಯರು (Students) ಒಪ್ಪದೆ ತರಗತಿ (Class) ಬಹಿಷ್ಕರಿಸಿದರು ಎಂದು ತಿಳಿದು ಬಂದಿದೆ.