Mar 28, 2022, 5:15 PM IST
ಶಿವಮೊಗ್ಗ (ಮಾ.28): ಶಿವಮೊಗ್ಗ (Shivamogga) ಜಿಲ್ಲೆಯ ಮೇರಿ ಇನ್ ಮ್ಯಾಕುಲೇಟ್ ಹೈಸ್ಕೂಲ್‌ನ (Mary Immaculate Girls High School) ಆವರಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ಬರೆಯಲು ಬಂದ ವಿದ್ಯಾರ್ಥಿಗಳು ಹಾಗೂ ಮಕ್ಕಳನ್ನು ಪರೀಕ್ಷೆಗೆ ಬಿಡಲು ಬಂದ ಪೋಷಕರ ಮೇಲೆ ಜೇನು ನೊಣ ದಾಳಿ ಮಾಡಿರುವ ಘಟನೆ ನಡೆದಿದೆ. ಐವರು ವಿದ್ಯಾರ್ಥಿಗಳ ಮೇಲೆ ಮತ್ತು ಹಲವು ಮಂದಿ ಪೋಷಕರು ಮತ್ತು ಸಿಬ್ಬಂದಿಯ ಮೇಲೆ ಜೇನು ನೊಣ ದಾಳಿ ನಡೆಸಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆ ಕೇಂದ್ರದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಯ್ತು.
ಪರೀಕ್ಷೆ ಬರೆಯಲು ಹೊರಟ ವಿಜಯಪುರ ವಿದ್ಯಾರ್ಥಿಗೆ ತಿಥಿ ಮಾಡಿ ಕಿಡಿಗೇಡಿಗಳ ಕಾಟ!
ಘಟನೆಯಿಂದ ಸಮಯ ತಡವಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಲು ಡಿಡಿಪಿಐ ಸೂಚಿಸಿದ್ದಾರೆ. ಜೇನು ನೊಣ ದಾಳಿ ಬಳಿಕ ಶಾಲೆಯ ಬಳಿಯೇ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 94 ಪರೀಕ್ಷೆ ಕೇಂದ್ರದಲ್ಲಿ 24,370 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯತ್ತಿದ್ದಾರೆ.