Hijab Row ತಣ್ಣಗಿದ್ದ ಚಿಕ್ಕಮಗಳೂರಲ್ಲೂ ಹೆಚ್ಚಾಯ್ತು ಹಿಜಾಬ್ ಕಿಚ್ಚು

Feb 17, 2022, 6:38 PM IST

ಬೆಂಗಳೂರು, (ಫೆ.17): ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಅಂತಿಮವಾಗಿ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಇಡೀ ರಾಜ್ಯ ಕಾದು ಕುಳಿತಿದೆ.

ಹಿಜಾಬ್ ವಿವಾದ, ವಕೀಲ ರೆಹಮತ್ ಉಲ್ಲಾ ಕೊತ್ವಾಲ್‌ ಅರ್ಜಿ ತಳ್ಳಿಹಾಕಿದ ಹೈಕೋರ್ಟ್ 

 ಹಿಜಾಬ್ ಧರಿಸಿ ಬರದಂತೆ ಹೈಕೋರ್ಟ್ ( High Court ) ಮಧ್ಯಂತರ ಆದೇಶ ನೀಡಿದ್ದರೂ, ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎನ್ನುವಂತೆ ವಿದ್ಯಾರ್ಥಿಗಳು  ಹಿಜಾಬ್ ಧರಿಸಿಯೇ ( Hijab Row ) ಕಾಲೇಜುಗಳಿಗೆ ಆಗಮಿಸಿದ್ದಾರೆ.  ನಿನ್ನೆಯಿಂದ (ಫೆ.16) ಆರಂಭವಾದ ಕಾಲೇಜುಗಳಿಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ. ಅಲ್ಲದೇ, ಹಿಜಾಬ್ ಬಿಡಲ್ಲ ಅಂತ ಪ್ರತಿಭಟನೆ ನಡೆಯುತ್ತಿವೆ. 

ಇನ್ನೂ ತಣ್ಣಗಿದ್ದ ಚಿಕ್ಕಮಗಳೂರಿಗೆ ಹಿಜಾಬ್ ಕಿಚ್ಚು ವ್ಯಾಪಿಸಿದ್ದು, ಮಕ್ಕಳ ಜೊತಗೆ ಪೋಷಕರೂ ಸಹ ಬೀದಿಗಿಳಿದಿದ್ದಾರೆ. ಅಲ್ಲದೇ ಹಿಜಾಬ್ ನಿಷೇಧಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.