Jan 12, 2022, 1:23 PM IST
ಬೆಂಗಳೂರು (ಜ. 12):ಶಾಲೆ-ಕಾಲೇಜುಗಳಲ್ಲಿ (School- College) ಕೊರೊನಾ ಸ್ಫೋಟ ಹಿನ್ನಲೆಯಲ್ಲಿ ಶಾಲೆಗಳನ್ನು ಬಂದ್ ಮಾಡಬೇಕಾ, ಮುಂದುವರೆಸಬೇಕಾ ಎಂಬುದರ ವಿಚಾರವಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಹತ್ವದ ಸಭೆ ನಡೆಸಿದ್ದಾರೆ.
Omicron Variant: ರೋಗಲಕ್ಷಣ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಇಲಾಖೆ
'ಗ್ರೌಂಡ್ ರಿಯಾಲಿಟಿ ಆಧರಿಸಿ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಶಾಲೆಗಳನ್ನು ಮುಂದುವರೆಸುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಟಾಸ್ಕ್‌ಫೋರ್ಸ್ ಜೊತೆಯೂ ಸಭೆ ನಡೆಸಿದ್ದೇವೆ. ತಾಲ್ಲೂಕು ಹಂತಗಳಲ್ಲಿ ಡಿಸಿಗೆ ಅಧಿಕಾರ ಕೊಟ್ಟಿದ್ದೇವೆ. ಸೋಂಕು ಹೆಚ್ಚಾದರೆ ಮತ್ತೊಮ್ಮೆ ಚರ್ಚೆಗೆ ಕೂರುತ್ತೇವೆ' ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.