Jan 2, 2022, 10:31 AM IST
ರಾಯಚೂರು (ಜ.02):ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆ ಶಿಕ್ಷಕರು ಸರ್ಕಾರದ ವರ್ಗಾವನೆಯ ವಿಚಾರದ ವಿಳಂಭ ದೋರಣೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ವರ್ಗಾವಣೆ ಇಲ್ಲದೇ ಇಲ್ಲಿನ ಅನೇಕ ಶಿಕ್ಷಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ವಿವಿಧೆಡೆ ಸೇವೆ ಸಲ್ಲಿಸುತ್ತಿರುವವರು 10 ರಿಂದ 12 ವರ್ಗಳಾದರು ವರ್ಗಾವಣೆ ಆಗುತ್ತಿಲ್ಲ. ಅಲ್ಲದೇ ವಿವಿಧ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
Teachers Transfer: 50,000 ಶಿಕ್ಷಕರಿಗಿಲ್ಲ ವರ್ಗಾವಣೆ ಭಾಗ್ಯ..!
ಕುಟುಂಬಕ್ಕಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಕುಟುಂಬವನ್ನೇ ಕಳೆದುಕೊಳ್ಳುವ ಸ್ಥಿತಿ ಇದೆ ಎನ್ನುತ್ತಿದ್ದಾರೆ. ಕೌಟುಂಬಿಕ ಕಲಹಗಳು ಆಗುತ್ತಿವೆ. ಕೆಲವರು ಒಂಟಿಯಾಗಿ ಜೀವನ ಮಾಡಬೇಕಾದ ಸ್ಥಿತಿ ಇದೆ. ಬೇರೆ ಬೇರೆ ಜಿಲ್ಲೆಗಳಿಂದ ಬಂದು ಇಲ್ಲಿ ಬಂದು ಸೇವೆ ಸಲ್ಲಿಸುತ್ತಿದ್ದು ಈಗ ವರ್ಗಾವಣೆ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.