ಬೆಂಗಳೂರಿನ ಮತ್ತೊಂದು ಶಾಲೆಗೆ ಬಾಂಬ್‌ ಬೆದರಿಕೆ, ಸ್ಥಳಕೆ ಪೊಲೀಸರು ದೌಡು

Apr 11, 2022, 7:33 PM IST

ಬೆಂಗಳೂರು(ಏ.11): ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಸುಮಾರು 9 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಇದೀಗ ಮತ್ತೆ ಬೆಂಗಳೂರಿನ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಶಾಲಾ ಆಡಳಿತ ಮಂಡಳಿ ಪೋಲಿಸ್ ದೂರು ನೀಡಿದೆ.

UGC NET 2022 Exam ಜೂನ್ ನಲ್ಲಿ ನಡೆಯಲಿದೆ ಯುಜಿಸಿ ನೆಟ್ ಪರೀಕ್ಷೆ

ರೆಸಿಡೆನ್ಸಿ ರಸ್ತೆಯಲ್ಲಿನ ಬಿಷಪ್ ಕಾಟನ್ ಸ್ಕೂಲ್ ಗೆ ಕಿಡಿಗೇಡಿಗಳು ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದು, ತಕ್ಷಣ ಕಬ್ಬನ್  ಪಾರ್ಕ್ ಠಾಣಾ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.