May 17, 2022, 3:59 PM IST
ಬೆಂಗಳೂರು, (ಮೇ.17): ಶಾಲಾ ಪಠ್ಯಪುಸ್ತಕದಲ್ಲಿ ಆರ್.ಎಸ್.ಎಸ್ ( RSS )ಸಂಸ್ಥಾಪಕ ಹೆಡ್ಗೆವಾರ್ (Hedgewar) ಅವರ ಭಾಷಣ ಸೇರ್ಪಡೆಗೆ ಸರ್ಕಾರ ಸೇರಿಸಿದ್ದು, ಇದಕ್ಕೆ ಸಾಮಾಜಿಕ ಜಾಲತಣಗಳಲ್ಲಿ ಪರ-ವಿರೋಧ ಚರ್ಚೆಗಳು ಆಗುತ್ತಿವೆ.
ಭಗತ್ ಸಿಂಗ್ ಅವರ ಪಠ್ಯ ತೆಗೆದು ಹೆಡ್ಗೇವಾರ್ ಪಠ್ಯ ಅಳವಡಿಕೆ ಮಾಡಿಲ್ಲ: ರೋಹಿತ್ ಚಕ್ರತೀರ್ಥ
ಹೌದು...ಶಿವಕೋಟ್ಯಾಚಾರ್ಯರ ಸುಕುಮಾರ ಸ್ವಾಮಿಯ ಕಥೆಯನ್ನು ಶಾಲಾ ಪಠ್ಯಪುಸ್ತಕದಿಂದ ಕೈಬಿಡಲಾಗಿದೆ. ಸುಕುಮರ ಸ್ವಾಮಿಯ ಕಥೆ ಬದಲು ಹೆಡ್ಗೆವಾರ್ ಪಾಠವನ್ನು ಸೇರ್ಪಡೆ ಮಾಡಲಾಗಿದೆ. ಇನ್ನು ಪಠ್ಯಪುಸ್ತಕ ಪರಶೀಲನಾ ಸಮಿತಿ ಟಿಪ್ಪುವಿನ ಎಲ್ಲಾ ವಿವರಣೆಗಳಿಗೆ ಕತ್ತರಿಹಾಕಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.