ಭಗತ್ ಸಿಂಗ್ ಅವರ ಪಠ್ಯ ತೆಗೆದು ಹೆಡ್ಗೇವಾರ್ ಪಠ್ಯ ಅಳವಡಿಕೆ ಮಾಡಿಲ್ಲ: ರೋಹಿತ್ ಚಕ್ರತೀರ್ಥ
'ಭಗತ್ ಸಿಂಗ್ ಅವರ ಪಾಠವನ್ನು ತೆಗೆದು ಹೆಡ್ಗೆವಾರ್ ಪಠ್ಯವನ್ನು ಸೇರಿಸಿಲ್ಲ, ಹೆಡ್ಗೆವಾರ್ ಅವರ ಭಾಷಣದ ಲಿಖಿತ ರೂಪವನ್ನು ಹಾಕಿದ್ದೇವೆ. ಅದರಲ್ಲಿ ಹೆಡ್ಗೇವಾರ್ ಅವರ ಉದಾತ್ತ ಚಿಂತನೆಯನ್ನು ಹಾಕಿದ್ದೇವೆ, ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಇದು ಸಹಕಾರಿ. ನಮ್ಮ ಅಜೆಂಡಾವನ್ನು ತುರುಕುವ ಪ್ರಯತ್ನ ಮಾಡಿಲ್ಲ' ಎಂದು ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಮೇ. 16): ರಾಜ್ಯ ಸರ್ಕಾರವು ಹೊಸದಾಗಿ ಪ್ರಕಟಿಸುತ್ತಿರುವ 10ನೇ ತರಗತಿ (SSLC) ಕನ್ನಡ ಪಠ್ಯ ಪುಸ್ತಕದಲ್ಲಿ ಭಗತ್ ಸಿಂಗ್ (Bhagat singh) ಅವರ ಪಾಠ ಕೈಬಿಟ್ಟು, ಕೆ.ಬಿ.ಹೆಡ್ಗೇವಾರ್ )KB Hedgewar) ಭಾಷಣ ಸೇರ್ಪಡೆ ಮಾಡಿರುವುದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದೆ. ಈ ಮೂಲಕ ಶಿಕ್ಷಣದಲ್ಲಿ ಕೇಸರಿಕರಣಕ್ಕೆ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
SSLC ಪಠ್ಯದಲ್ಲಿ ಭಗತ್ ಸಿಂಗ್ ಪಾಠ ಕೈ ಬಿಟ್ಟಿದ್ದಕ್ಕೆ ವಿಪಕ್ಷಗಳಿಂದ ಆಕ್ರೋಶ