Jan 10, 2024, 1:08 PM IST
ಚಿತ್ರದುರ್ಗ(ಜ.10): ಅವಳು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಲೋಕದ ದಿಗ್ಗಜೆ. ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯ CEO.. ಇಂಥವಳು ಇವತ್ತು ಇಡೀ ದೇಶಕ್ಕೇ ಶಾಕ್ ಕೊಟ್ಟಿದ್ದಾಳೆ. ಗೋವಾ ಟ್ರಿಪ್ ಮುಗಿಸಿಕೊಂಡು ಬರುವಾಗ ಚಿತ್ರದುರ್ಗದಲ್ಲಿ ಪೊಲೀಸರ ಕೈಗೆ ಈಕೆ ಸಿಕ್ಕಿಬಿದ್ದಿದ್ಲು. ಆಕೆಯ ಸೂಟ್ಕೇಸ್ ಓಪನ್ ಮಾಡಿದ್ರೆ ಪುಟ್ಟ ಮಗುವಿನ ಹೆಣ. ಇನ್ನೂ ಆ ಮಗು ಅವಳದ್ದೇ ಆಗಿತ್ತು. ತನ್ನದೇ ಮಗುವನ್ನ ಕೊಂದು ಆ ಮಹಾತಾಯಿ ಸೂಟ್ಕೇಸ್ನಲ್ಲಿ ತುಂಬಿಕೊಂಡು ಬಂದಿದ್ಲು.
ಹೌದು, ಗೋವಾ ಪೊಲೀಸರ ಕೋರಿಕೆ ಮೇರೇಗೆ ಸುಚಾನಾಳ ಕಾರು ನಿಲ್ಲಿಸಿ ತಪಾಸಣೆ ನಡೆಸಿದ ಚಿತ್ರದುರ್ಗ ಪೊಲೀಸರಿಗೆ ಸೂಟ್ಕೇಸ್ನಲ್ಲಿ ಮಗು ಶವ ಸಿಕ್ಕಿತ್ತು. ಅದೂ ಕೂಡ ಸ್ವತಹ ಸುಚಾನಾಳ ಮಗುನದ್ದೇ...ಹಾಗಾದ್ರೆ ಸ್ವತಃ ಸುಚಾನಾ ತನ್ನ ಮಗುವನ್ನ ಕೊಂದು ಸೂಟ್ಕೇಸ್ನಲ್ಲಿ ಇಟ್ಟಳಾ..? ಗೋವಾ ಪೊಲೀಸರಿಗೆ ಮಗುವಿನ ಕೊಲೆಯ ಬಗ್ಗೆ ಮಾಹಿತಿ ಸಿಕ್ಕಿದ್ದೇಗೆ..? ಸುಚಾನಾ ಪೊಲೀಸರಿಗೆ ತಗ್ಲಾಕಿಕೊಂಡ ಬಗೆಯ ರೋಚಕ ಕಥೆ ಇಲ್ಲಿದೆ.
ಹತ್ತೇ ಹತ್ತು ಸೆಕೆಂಡ್, ನಡೀತು ಘನಘೋರ ದುರಂತ..25 ಅಡಿ ಕಟೌಟ್ ನಿಲ್ಲುವ ಮೊದಲೇ ಬಿತ್ತು 3 ಹೆಣ!
ಅವಳು ಬ್ಯುಸಿನೆಸ್ನಲ್ಲಿ ರಾಣಿಯಾಗಿದ್ರೂ ತನ್ನದೇ ಮಗು ವಿಷಯಕ್ಕೆ ಬಂದಾಗ ವಿಲನ್ ಆಗಿದ್ದಳು. ತನ್ನ ಮೂರು ವರ್ಷದ ಮದುವೆಗೆ ಎಳ್ಳು ನೀರು ಬಿಟ್ಟ ಸುಚಾನಾ ಗಂಡನಿಂದ ದೂರವಾಗಿದ್ಲು. ಆದ್ರೆ ಕೋರ್ಟ್ ವಾರದಲ್ಲಿ ಒಂದು ದಿನ ಮಗು ತಂದೆ ಜೊತೆ ಇರಬೇಕು ಅಂತ ಹೇಳಿತು ಅಷ್ಟೆ. ಮಗುವನ್ನ ತಂದೆಯ ಬಳಿ ಕಳಿಸಲು ಇಷ್ಟವಿಲ್ಲದ ಸುಚಾನಾ ತನ್ನ ಮಗುವನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿಬಿಟ್ಟಳು. ಅದಕ್ಕಾಗಿ ಗೋವಾಗೂ ಬಂದಳು. ಆದ್ರೆ ಮಗುವನ್ನ ಕೊಲ್ಲುವಾಗ ಇದ್ದ ಧೈರ್ಯ ಆಕೆಗೆ ಪ್ರಾಣ ಕಳೆದುಕೊಳ್ಳುವಾಗ ಇರಲಿಲ್ಲ. ಸೀದಾ ಕೊಂದ ಮಗುವನ್ನ ತನ್ನ ಸೂಟ್ಕೇಸ್ನಲ್ಲಿ ಹಾಕಿಕೊಂಡು ಬೆಂಗಳೂರಿಗೆ ಹೊರಟಳು. ಆದ್ರೆ ಅವಳೆ ಬಿಟ್ಟು ಹೋಗಿದ್ದ ಕೆಲ ಎವಿಡೆನ್ಸ್ಗಳು ಬೆಂಗಳೂರು ತಲುಪೋದಕ್ಕೂ ಮೊದಲೇ ಪೊಲೀಸರಿಗೆ ತಗ್ಲಾಕಿಕೊಳ್ಳುವಂತೆ ಮಾಡಿತ್ತು.
ಮಗುವನ್ನ ಕೊಂದು ಸೂಟ್ಕೇಸ್ನಲ್ಲಿಟ್ಟ ಈ ತಾಯಿಯನ್ನ ಏನಂತ ಕರೆಯಬೇಕೋ ಅರ್ಥವಾಗ್ತಿಲ್ಲ.. ಅಪ್ಪನ ಬಳಿ ಕಳಿಸಲು ಇಷ್ಟವಿಲ್ಲ ಅನ್ನೋ ಒಂದೇ ಕಾರಣಕ್ಕೆ ಮಗುವನ್ನೇ ಕೊಲ್ಲೋ ಹಂತಕ್ಕೆ ಹೋಗುವ ಇಂಥವರನ್ನ ಮನುಷ್ಯರು ಅಂತ ಕರೆಯೋದಕ್ಕೆ ಸಾಧ್ಯವೇ ಇಲ್ಲ.. ಕಟ್ಟ ತಂದೆ ಇರ್ತಾರೆ ಆದ್ರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತನ್ನ ಸುಳ್ಳು ಮಾಡಿರೋ ಈಕೆಗೆ ಅದೇನ್ ಶಿಕ್ಷೆ ಕೊಟ್ಟರೂ ಕಡಿಮೇನೆ.