Nov 7, 2020, 4:51 PM IST
ಬೆಂಗಳೂರು (ನ. 07): ಯೋಗೇಶ್ ಗೌಡ ಜೊತೆ ವಿನಯ್ ಕುಲಕರ್ಣಿಗೆ ವೈಯಕ್ತಿಕ ದ್ವೇಷ ಇತ್ತು. 2016 ರ ಜಿ. ಪಂ ಚುನಾವಣೆಯಿಂದ ಹಿಂದೆ ಸರಿಯುವಂತೆ ಒತ್ತಡ ಹೇರಿದ್ದರು ವಿನಯ್ ಕುಲಕರ್ಣಿ. ಆದರೆ ಈ ಬೆದರಿಕೆಗೆ ಯೋಗೇಶ್ ಗೌಡ ಮಣಿಯುವುದಿಲ್ಲ. 2016, ಫೆಬ್ರವರಿ 13 ರಂದು ಧಾರವಾಡ ಜಿ. ಪಂ ಚುನಾವಣೆ ನಡೆಯುತ್ತದೆ. ಅಂದು ಯೋಗೇಶ್ ಗೌಡ ಅರೆಸ್ಟ್ ಆಗುತ್ತಾರೆ.
ಇದೆಲ್ಲಾ ರಾಜಕೀಯ ಎಂದ ವಿನಯ್ ಕುಲಕರ್ಣಿಗೆ ಸಿಬಿಐ ಖಡಕ್ ತಿರುಗೇಟು, ಮಾಜಿ ಸಚಿವ ಗಪ್‌ಚುಲ್
ವಿನಯ್ ಕುಲಕರ್ಣಿ - ಯೋಗೇಶ್ ಗೌಡ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಆಪ್ತ ಬಸವರಾಜ್ ಮುತ್ತಗಿ ಜೊತೆ ಯೋಗೇಶ್ ಹತ್ಯೆಗೆ ಕುಲಕರ್ಣಿ ಸ್ಕೆಚ್ ಹಾಕ್ತಾರೆ. ಕೊಲೆಗೆ ಕಾರಣ ತೋರಿಸಲು ರಿಯಲ್ ಎಸ್ಟೇಟ್ ಒಪ್ಪಂದದ ಪ್ಲಾನ್ ಮಾಡುತ್ತಾರೆ. ಮುತ್ತಗಿ ಮತ್ತು ನಾಗೇಂದ್ರ ತೋಡ್ಕರ್ ನಡುವೆ ಜಮೀನು ಒಪ್ಪಂದವಾಗುತ್ತದೆ. ಈ ಜಮೀನು ಕಬಳಿಸಲು ಯೋಗೇಶ್ ಗೌಡ ಕಣ್ಣು ಹಾಕಿದ್ದ ಎಂದು ಕಥೆ ಕಟ್ಟಲಾಗುತ್ತದೆ. ಆದರೆ ಇದರಲ್ಲಿ ಯೋಗೇಶ್ ಪಾತ್ರ ಇಲ್ಲ ಎಂದು ತನಿಖೆ ವೇಳೆ ತಿಳಿದು ಬರುತ್ತದೆ.