May 25, 2024, 2:12 PM IST
ನಿತ್ಯವೂ ಸಾಮಾನ್ಯ ಜನರು ಹಾಗೂ ಗಣ್ಯರನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಹಣ ವಂಚನೆ ಮಾಡುವ ಸ್ಕ್ಯಾಮರ್‌ಗಳು(Online Fraud) ಹೆಚ್ಚಾಗುತ್ತಲೇ ಇದ್ದಾರೆ. ಈ ನಡುವೆ ಗಣ್ಯ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಲಕ್ಷ-ಲಕ್ಷ ಸುಲಿಗೆ ಮಾಡಿರುವ ಘಟನೆ ವರದಿಯಾಗಿದೆ. ವಿಜಯಪುರದಲ್ಲಿ(Vijayapura) ಸೆನ್ ಪೊಲೀಸರಿಂದ ವಿಚಿತ್ರ ಪ್ರಕರಣ ಬಯಲಾಗಿದ್ದು, ಹಣ ಸುಲಿಗೆ ಮಾಡಲು ಈ ಗ್ಯಾಂಗ್ ಮಾಡಿದ್ದ ಪ್ಲ್ಯಾನ್ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ನಾರ್ಕೋಟಿಕ್ಸ್ ಕ್ರೈಂ ಬ್ರ್ಯಾಂಚ್ (Narcotics Crime Branch) ಹೆಸರಿನಲ್ಲಿ ಈ ಸುಲಿಗೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಗಣ್ಯ ವ್ಯಕ್ತಿಗಳನ್ನ ಟಾರ್ಗೆಟ್ ಮಾಡಿ, ಮಾಹಿತಿ ಕಲೆಹಾಕ್ತಿದ್ದ ಗ್ಯಾಂಗ್ ನಾರ್ಕೊಟಿಕ್ ಕ್ರೈಂ ಬ್ರ್ಯಾಂಚ್ ಹೆಸರಿನಲ್ಲಿ ಬೆದರಿಕೆ ಹಾಕುವ ಕೆಲಸ ಮಾಡುತ್ತದೆ. ಇದೇ ಕಾರಣ ಇಟ್ಟುಕೊಂಡು ವೈದ್ಯನಿಂದ ಬರೋಬ್ಬರಿ 50 ಲಕ್ಷ ಸುಲಿಗೆ ಮಾಡಲಾಗಿದೆ. ವೈದ್ಯನನ್ನು ನೀವು ಡ್ರಗ್ಸ್(Drugs) ಅನ್ನು ಕಾಬೂಲ್ ಗೆ ಡ್ರಗ್ಸ್ ಕಳುಹಿಸಿದ್ದೀರಿ ಎಂದು ಬೆದರಿಸಿ ಈ ಕೆಲಸ ಮಾಡಿದ್ದಾರೆ. ನಿಮ್ಮ ಪಾರ್ಸಲ್‌ನಲ್ಲಿ 950 ಗ್ರಾಂ MDMA ಮಾತ್ರೆಗಳು, 15 ಇಂಟರ್ನ್ಯಾಷನಲ್ ಸಿಮ್ ಕಾರ್ಡ್ ಸಿಕ್ಕಿವೆ. ಡ್ರಗ್ಸ್ ಇದ್ದ ನಿಮ್ಮ ಪಾರ್ಸಲ್ ಡಿಲಿವರಿ ಆಗದೆ ವಾಪಸ್ ಬಂದಿದೆ. ವಿಚಾರಣೆಗೆ ಹಾಜರಾಗಿ ಎಂದು ವೈದ್ಯನಿಗೆ ತಿಳಿಸಿದೆ.
ಮುಂಬೈ ನಾರ್ಕೊಟಿಕ್ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಎಂದು ಬೆದರಿಕೆ(Threat) ಹಾಕಿದ ಕಾರಣಕ್ಕೆ ಇದು ನಿಜ ಎಂದು ನಂಬಿದ ವೈದ್ಯ ಅವರು ಹೇಳಿದಂತೆ ಕೇಳಿದ್ದಾರೆ. ಈ ನಡುವೆ ಸ್ಕೈಪ್ ಆಫ್ ನಲ್ಲಿ ವೈದ್ಯನ ವಿಚಾರಣೆ ಸಹ ನಡೆಸಿದ್ದಾರೆ ವಂಚಕರು. ಕ್ರೈಂ ಬ್ರಾಂಚ್ ಪೊಲೀಸರ ಬಟ್ಟೆಯಲ್ಲಿ ವಿಡಿಯೋ ಕಾಲ್ ಮಾಡಿ ವಿಚಾರಣೆ ಮಾಡಲಾಗಿದ್ದು, ನಮ್ಮ ಸಿಬ್ಬಂದಿ ನಿಮ್ಮನ್ನು ಅರೆಸ್ಟ್ ಮಾಡಿಕೊಂಡು ಬರ್ತಾರೆ ಎಂದು ಬೆದರಿಕೆ ಹಾಕಿದ್ದಾರೆ. ಆದರೆ ಈ ಪ್ರಕರಣ ಇತ್ಯರ್ಥಕ್ಕೆ 54 ಲಕ್ಷ ಹಣ ವರ್ಗಾವಣೆ ಮಾಡುವಂತೆ ಬೇಡಿಕೆ ಇಟ್ಟಿದೆ. ಹಣ ಕೊಡದೆ ಹೋದರೆ ಅರೆಸ್ಟ್ ಮಾಡುತ್ತೇವೆ ಎಂದು ತಿಳಿಸಿದ್ದಕ್ಕಾಗಿ ಮರ್ಯಾದೆಗೆ ಅಂಜಿ ಖದೀಮರ ಅಕೌಂಟ್‌ಗೆ ವೈದ್ಯ ಹಣ ವರ್ಗಾವಣೆ ಮಾಡಿದ್ದಾರೆ.
ಇದೆಲ್ಲಾ ಆದ ಮೇಲೆ ಇದು ಮೋಸದ ವ್ಯವಹಾರ ಎಂದು ಅರಿತು ವೈದ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿ, ಟೆಕ್ನಿಕಲ್ ಆಧಾರದ ಮೇಲೆ ಆರೋಪಿಗಳನ್ನ ಬಂಧಿಸಲಾ್ಇದೆ. ರಾಜೀವ್ ಸತ್ಪಾಲ್, ರಾಕೇಶ ಕುಮಾರ್ ಟೈಲರ್, ಕಿರಣ್ ಯಾದವ್, ಸುರೇಂದ್ರ ಸಿಂಗ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರೆಲ್ಲರೂ ರಾಜಸ್ಥಾನ, ಹರಿಯಾಣದ ನಿವಾಸಿಗಳಾಗಿದ್ದಾರೆ. ದುರಂತ ಏನೆಂದರೆ ಬಂಧಿತರು ಬರೋಬ್ಬರಿ 502 ಜನರಿಗೆ ಈ ರೀತಿ ಮೋಸ ಮಾಡಿದ್ದಾರೆ. ಇದಕ್ಕಾಗಿ ಇವರು ವಿವಿಧ ಬ್ಯಾಂಕ್ ಗಳಲ್ಲಿ 170 ಖಾತೆಗಳನ್ನ ಹೊಂದಿರುವುದನ್ನು ಕಂಡುಕೊಳ್ಳಲಾಗಿದೆ.
ಇದನ್ನೂ ವೀಕ್ಷಿಸಿ: ಪೊಲೀಸರ ಕಣ್ತಪ್ಪಿಸಲು 14 ವರ್ಷದ ಆರೋಪಿ ಮಾಡಿದ್ದೇನು ಗೊತ್ತಾ..? ಪ್ರಬುದ್ಧ ಕೊಲೆ ಸಂಪೂರ್ಣ ಪ್ಲ್ಯಾನ್ ಡಿಟೈಲ್ಸ್ ಇಲ್ಲಿದೆ..!