ಪೊಲೀಸರ ಕಣ್ತಪ್ಪಿಸಲು 14 ವರ್ಷದ ಆರೋಪಿ ಮಾಡಿದ್ದೇನು ಗೊತ್ತಾ..? ಪ್ರಬುದ್ಧ ಕೊಲೆ ಸಂಪೂರ್ಣ ಪ್ಲ್ಯಾನ್ ಡಿಟೈಲ್ಸ್ ಇಲ್ಲಿದೆ..!

ಪ್ರಬುದ್ಧ ಮನೆ ಮುಂದೆ ಇರುವ ಸಿಸಿಟಿವಿ ತಪ್ಪಿಸಲು ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದು, ಎಲ್ಲೂ ಸಿಸಿಟಿವಿಯಲ್ಲಿ ಸಿಕ್ಕಬೀಳದಂತೆ, ಅಕ್ಕಪಕ್ಕದ ಮನೆಯ ಟೆರೆಸ್ ಮೇಲಿಂದ ಆರೋಪಿ ಬಂದಿದ್ದಾನೆ.

First Published May 25, 2024, 2:01 PM IST | Last Updated May 25, 2024, 2:02 PM IST

ಬೆಂಗಳೂರಲ್ಲಿ ವಿದ್ಯಾರ್ಥಿನಿ ಪ್ರಬುದ್ಧ ಕೊಲೆ ಪ್ರಕರಣಕ್ಕೆ(Prabuddha Murder) ಸಂಬಂಧಿಸಿದಂತೆ ಆರೋಪಿ ಆಕೆಯನ್ನು ಕೊಲ್ಲಲು(Murder) ಯಾವ ರೀತಿ ಪ್ಲ್ಯಾನ್‌ ಮಾಡಿದ್ದ ಎಂಬ ಮಾಹಿತಿ ಇದೀಗ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಪ್ರಬುದ್ಧ ಮನೆ ಮುಂದೆ ಇರುವ ಸಿಸಿಟಿವಿ ತಪ್ಪಿಸಲು ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದು, ಎಲ್ಲೂ ಸಿಸಿಟಿವಿಯಲ್ಲಿ ಸಿಕ್ಕಬೀಳದಂತೆ, ಅಕ್ಕಪಕ್ಕದ ಮನೆಯ ಟೆರೆಸ್ ಮೇಲಿಂದ ಬಂದಿದ್ದಾನೆ ಎಂದು ತಿಳಿದುಬಂದಿದೆ. ಪ್ರಬುದ್ಧ ಮನೆ ತಲುಪಲು ಮನೆಯ ಟೆರಸ್(House Terrace) ಮೇಲಿಂದ ಬಂದು, ಸೀದಾ ಆಕೆಯ ಮನೆಯ ಹಿಂದಿನ ಬಾಗಿಲಿನ ಮೂಲಕ ಪ್ರವೇಶ ಮಾಡಿದ್ದಾನೆ. 2 ಸಾವಿರ ಕದ್ದ ವಿಚಾರವನ್ನು ಯಾರಿಗೂ ಹೇಳ ಬೇಡ ಎಂದಿದ್ದಾನೆ. ಅಪ್ಪ-ಅಮ್ಮನಿಗೂ ಹೇಳಬೇಡ ಎಂದು ಪ್ರಬುದ್ಧಳಿಗೆ ಮನವಿ ಮಾಡಿದ್ದಾನಂತೆ. ಪ್ಲಾನ್ ನಂತೆ ಮೊದಲೇ ಚಾಕುವನ್ನು ಅಪ್ರಾಪ್ತ ಆರೋಪಿ ತಂದಿದ್ದ, ಕಾಲಿಗೆ ಬಿದ್ದು ಪ್ರಬುದ್ಧಳಿಗೆ ಮನವಿಯನ್ನೂ ಮಾಡಿದ್ದ. ಆರೋಪಿ ಕಾಲು ಹಿಡಿದಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದ ಪ್ರಬುದ್ಧ, ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರಬುದ್ಧ ಕೈಯನ್ನು ಕಟ್ ಮಾಡಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆ ಪ್ರಬುದ್ಧ ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿದೇ ಕೈ ಕಟ್ ಮಾಡಿದ್ದಾನೆ ಎನ್ನಲಾಗ್ತಿದೆ. ಪ್ರಬುದ್ಧ ಮನೆಯ ಎರಡು ರಸ್ತೆಯ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸಿದ್ದಾರೆ. ಸಿಸಿಟಿವಿಯಲ್ಲಿ ಮನೆಯ ಕಾರ್ನರ್ ನಲ್ಲಿ ಹಂತಕನ  ದೃಶ್ಯ ಪತ್ತೆಯಾಗಿದೆ. ಎಂಟ್ರಿ ಆಗಿದ್ದ ವಿಶುವಲ್ ಇಲ್ಲ, ಎಕ್ಸಿಟ್ ಆಗಿದ್ದು ಮಾತ್ರ ಇದ್ದು, ಆರೋಪಿ ಎಕ್ಸಿಟ್ ಆಗುವುದು ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಪರಿಶೀಲನೆ ನಡೆಸಿದಾಗ ಆರೋಪಿ ಪ್ರಬುದ್ಧನ ತಮ್ಮನ ಸ್ನೇಹಿತ ಅನ್ನೋದು ಧೃಡ ಪಟ್ಟಿದೆ. ಆರೋಪಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ಸಂಪೂರ್ಣ ಕಥೆ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರಿಂದ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ನಡುರಾತ್ರಿ ಕಾರುಗಳ ಮಧ್ಯೆ ಡಿಕ್ಕಿ..ನಡು ರಸ್ತೆಯಲ್ಲೇ ತಲ್ವಾರ್ ಹಿಡಿದು ಗಲಾಟೆ: ವಿಡಿಯೋ

Video Top Stories