FIR: ನೀಲಿ ಸ್ಕೂಟಿಯ ಸುಂದರಿಯ ಕಿಡ್ನಾಪ್-ಮರ್ಡರ್ ಸೀಕ್ರೇಟ್..!

Jul 15, 2020, 3:20 PM IST

ಶಿವಮೊಗ್ಗ(ಜು.15): ಅವಳೊಬ್ಬಳಿದ್ದಳು ಸುಂದರಿ, ಮದುವೆಯಾಗಿ ಒಂದು ಮಗುವು ಇತ್ತು. ಗಂಡನಿಗೆ ಕುಡಿತದ ಚಟವಾದ್ರೆ, ಹೆಂಡತಿಗೆ ಅದಕ್ಕಿಂತ ದೊಡ್ಡ ಚಟ. ಹೆಂಡಿತಿ ಅದಾಗಲೇ ದಾರಿ ತಪ್ಪಿದ್ದಳು. ಅದೊಂದು ದಿನ ನೀಲಿ ಸ್ಕೂಟರ್ ಹತ್ತಿ ಮನೆಯಿಂದ ಹೊರಟಿದ್ದಳು, ಬಳಿಕ ಮನೆಗೆ ಬಂದೇ ಇರಲಿಲ್ಲ. ಆಮೇಲೆ ಸಿಕ್ಕಿದ್ದು ಆಕೆಯ ನೀಲಿ ಬಣ್ಣದ ಸ್ಕೂಟರ್ ಮಾತ್ರ.

ನೀಲಿ ಸ್ಕೂಟಿ ಸುಂದರಿ ನಾಪತ್ತೆಯಾದ ಹನ್ನೊಂದ ದಿನಗಳ ಬಳಿಕ ಈ ಪ್ರಕರಣಕ್ಕೆ ಮತ್ತೊಂದು ಭಯಾನಕ ಟ್ವಿಸ್ಟ್ ಸಿಕ್ಕಿತು. ಓಮಿನಿ ವ್ಯಾನ್, ನೀಲಿ ಸ್ಕೂಟಿ ಸುಂದರಿ ಹಾಗೂ ಅದೊಂದು ಗ್ಯಾಂಗ್. 

ಲಾಕ್‌ಡೌನ್ ಹೆಸರಲ್ಲಿ ವಸೂಲಿಗಿಳಿದ್ರಾ ಪೊಲೀಸರು..?

ನಾಪತ್ತೆಯಾದ ಸುಂದರಿ ಓಮಿನಿ ವ್ಯಾನ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಶಿವಮೊಗ್ಗದ ವಿದ್ಯಾನಗರ ಹಳೆ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯ ಆ ಇಂಟ್ರೆಸ್ಟಿಂಗ್ ಕಹಾನಿ ಇಂದಿನ FIR ನಲ್ಲಿ.