Oct 10, 2020, 6:06 PM IST
ಬೆಂಗಳೂರು (ಅ. 10): ಜನರ ಧಾರ್ಮಿಕ ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡು ಅದೆಷ್ಟೋ ಕಪಟ ಸ್ವಾಮಿಗಳು ಹಣ ಮಾಡುತ್ತಾರೆ. ಇನ್ನು ಕೆಲವರು ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಪೂಜೆ, ಪುನಸ್ಕಾರ ನೆಪದಲ್ಲಿ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ.
ಪ್ರತಿ ಕೊಲೆಯ ನಂತರವೂ ಆಡಿನ ಬಲಿ ಕೊಡುತ್ತಿದ್ದ ಈ ನಟೋರಿಯಸ್ ಕಿಲ್ಲರ್!
ಇಂತಹದ್ದೇ ಒಬ್ಬ ಕಪಟ ಸ್ವಾಮಿ ಶಿವಮೊಗ್ಗದಲ್ಲಿ ಹೆಣ್ಣು ಮಕ್ಕಳ ಜೊತೆ ಆಟ ಆಡುತ್ತಿದ್ದ. ವಿಚಾರ ತಿಳಿದ ಸುವರ್ಣ ನ್ಯೂಸ್ ಶಿವಮೊಗ್ಗಕ್ಕೆ ಅವನನ್ನು ಹುಡುಕಿಕೊಂಡು ಹೊರಟಿತು. ಆಗ ಆತನ ಒಂದೊಂದು ವಿಚಾರ ಬಯಲಾಯ್ತು. ಕೆಲವು ಹೆಣ್ಣು ಮಕ್ಕಳು ಮಾತನಾಡಿದರು. ಈ ಹೆಣ್ಣು ಬಾಕನ ಅಸಲಿ ಮುಖವನ್ನು ಸುವರ್ಣ ನ್ಯೂಸ್ ಬಯಲು ಮಾಡಿತು. ಉಪ್ಪು ತಿಂದವ ನೀರು ಕುಡಿಯಲೇಬೇಕು. ತಪ್ಪು ಮಾಡಿದವ ಶಿಕ್ಷೆ ಅನುಭವಿಸಲೇಬೇಕು. ಕೊನೆಗೂ ಈ ಸ್ವಾಮಿಗೆ 14 ವರ್ಷ ಜೈಲು ಶಿಕ್ಷೆಯಾಗಿದೆ. ಇದು ಸುವರ್ಣ ನ್ಯೂಸ್ ಇಂಪ್ಯಾಕ್ಟ್!