ಕಿಲ್ಲಿಂಗ್ ಸ್ಟಾರ್ ಬೇಟೆಯ ಹಿಂದೆ ‘ಮೆಗಾ ಮಾಸ್ಟರ್’ ಪ್ಲ್ಯಾನ್’! 13 ಸೂಪರ್ ಕಾಪ್..‘ರೋಚಕ ಆಪರೇಷನ್’..!

Jun 16, 2024, 5:13 PM IST

ದರ್ಶನ್ ಪೊಲೀಸ್ ಅಧಿಕಾರಿಯಾಗಿ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಖಾಕಿ ತೊಟ್ಟು ಹೀರೋಯಿಸಂ ತೋರಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಆದ್ರೆ, ರಿಯಲ್ ಪೊಲೀಸರು ಹೇಗಿರ್ತಾರೆ, ಅಖಾಡಕ್ಕಿಳಿದ್ರೆ ಪೊಲೀಸ್ರ ಕಾರ್ಯವೈಖರಿ ಹೇಗಿರತ್ತೆ ಅನ್ನೋದನ್ನು ‘ರೀಲ್’ ಹೀರೋಗೆ ರಿಯಲ್ಲಾಗಿ  ತೋರಿಸಿ ಕೊಟ್ಟಿದ್ದಾರೆ ಸೂಪರ್ ಕಾಪ್‌ಗಳು. ದರ್ಶನ್(Darshan) ತೂಗುದೀಪ ದೊಡ್ಡ ಫ್ಲಾನ್ ಬೇಸ್ ಹೊಂದಿರುವ ನಟ. ದರ್ಶನ್'ನಂಥಾ ಸೆಲೆಬ್ರಿಟಿಯನ್ನು, ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ ನಾಯಕ ನಟನನ್ನು ಅರೆಸ್ಟ್ ಮಾಡೋದಂದ್ರೆ ಅದೇನು ಸುಮ್ಮನೆ ಮಾತಲ್ಲ. ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದ ಕೂಡ್ಲೇ, ಅರೆಸ್ಟ್ ಮಾಡೋದಕ್ಕೆ ಏನೆಲ್ಲಾ ಬೇಕೋ ಅಷ್ಟಕ್ಕೂ ಸೈಲೆಂಟಾಗಿ ಮಾಡಿ ಮುಗಿಸಿದ ಖಾಕಿ, ನೇರವಾಗಿ ದರ್ಶನ್ ಅಡ್ಡಾಗೆ ನುಗ್ಗಿ ಎತ್ತಾಕಿಕೊಂಡು ಬಂದದ್ದೇ ಒಂದು ರೋಚಕ ಕಥೆ. ಚಿತ್ರದುರ್ಗದ ಯುವಕ ರೇಣುಕಾಸ್ವಾಮಿಯನ್ನು(Renukaswamy) ದರ್ಶನ್ ಆ್ಯಂಡ್ ಗ್ಯಾಂಗ್ ಚಿತ್ರಹಿಂಸೆ ಕೊಟ್ಟು, ಕೊಲೆ ಮಾಡಿ ಬೆಂಗಳೂರಿನ ಸುಮ್ಮನಹಳ್ಳಿಯ ಮೋರಿಗೆ ಎಸೆದು ಬಿಟ್ಟಿತ್ತು. ಅಪರಿಚತ ಶವ, ಹಿಂದೆ-ಮುಂದೆ ಯಾರೂ ಇಲ್ಲ.. ಪೊಲೀಸರು ಕೇಸ್ ಕ್ಲೋಸ್ ಮಾಡಿ ಬಿಡ್ತಾರೆ ಅಂದ್ಕೊಂಡಿದ್ದವರಿಗೆ ದೊಡ್ಡ ಶಾಕ್ ಎದುರಾಗಿತ್ತು. ಶವ ಪತ್ತೆಯಾಗ್ತಿದ್ದಂತೆ ತನಿಖೆಗಿಳಿದ ಪೊಲೀಸ್ ಟೀಮ್, ಪಾತಾಳದಲ್ಲಿ ಅಡಗಿದ್ದ ಮರ್ಡರ್ ಮಿಸ್ಟರಿಯನ್ನು ಹೊರಗೆಳೆದು ಬಿಡ್ತು. ನಟ ದರ್ಶನ್ ಮತ್ತು ಆತನ ರೌಡಿ ಪಟಾಲಂ ಅನ್ನು ಹೆಡೆಮುರಿ ಕಟ್ಟಿ, ಸಮಾಧಿಯಾಗ್ತಿದ್ದ ಸತ್ಯಕ್ಕೆ ನಾಯ ತಂದು ಕೊಟ್ಟಿದೆ. ಪೊಲೀಸರ ಕೆಲಸಕ್ಕೆ ಇಡೀ ರಾಜ್ಯವೇ ಶಹಬ್ಬಾಸ್ ಅಂತಿದೆ. 

ಇದನ್ನೂ ವೀಕ್ಷಿಸಿ:  Renukaswamy Murder Case: ಕೇಸ್‌ನಿಂದ ತಪ್ಪಿಸಿಕೊಳ್ಳಲು ದರ್ಶನ್ ಕುತಂತ್ರ..! ಬಡವರ ಮನೆ ಮಕ್ಕಳು ಅಂದ್ರೆ ಹೀಗಾ..?