ರೇಣುಕಾಸ್ವಾಮಿ ಕೊಲೆ ಪ್ರಕರಣ: ಎಲ್ಲೆಲ್ಲಿಂದ ಪೊಲೀಸರು ಸಿಸಿಟಿವಿ ಸಂಗ್ರಹಿಸಿದ್ದಾರೆ ಗೊತ್ತಾ ?

Jul 15, 2024, 4:36 PM IST

ದರ್ಶನ್ ಗ್ಯಾಂಗ್‌ನಿಂದ(Darshan) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. 33ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು(Police) ಸಂಗ್ರಹಿಸಿದ್ದಾರೆ. ಆರೋಪಿಗಳ ಚಲನವಲನ, ಓಡಾಡಿರುವ ಏರಿಯಾಗಳು, ಮೃತದೇಹ ಸಾಗಿಸಿದ ಮಾರ್ಗದ ಸಿಸಿಟಿವಿ ದೃಶ್ಯಾವಳಿ ಸಂಗ್ರಹ‌ ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿ(CCTV) ಸಂಗ್ರಹಿಸಿ ಪರಿಶೀಲನೆಯನ್ನು ಪೊಲೀಸರು ನಡೆಸಿದ್ದಾರೆ. ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಸಿಸಿಟಿವಿ ದೃಶ್ಯಾವಳಿಯಾಗಿದೆ. ಪ್ರಕರಣ ಸಂಬಂಧ ಈವರೆಗೆ 33ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯ ಪತ್ತೆಯಾಗಿದೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ಪಾರ್ಟಿ ಮಾಡಿದ್ದ ರೆಸ್ಟೋರೆಂಟ್, ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಿಂದ ಪಟ್ಟಣಗೆರೆ ಶೆಡ್,ರೆಸ್ಟೋರೆಂಟ್ ಹಾಗೂ ಶೆಡ್ ವರೆಗಿನ ಮಾರ್ಗ ಮಧ್ಯದ ಸಿಸಿಟಿವಿ ದೃಶ್ಯ ಸಂಗ್ರಹಿಸಲಾಗಿದೆ. ದರ್ಶನ್ , ಪವಿತ್ರಾಗೌಡ ಮನೆ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದು, ಈವರೆಗೆ 33ಕ್ಕೂ ಹೆಚ್ಚು ಸಿಸಿಟಿವಿಗಳ ದೃಶ್ಯಾವಳಿ ಸಂಗ್ರಹ ಮಾಡಲಾಗಿದೆ. ಇದನ್ನು ಎಫ್ಎಸ್ಎಲ್‌ಗೆ ರವಾನೆ ಮಾಡಲಾಗಿದೆ. FSL ಹಾಗೂ ಸಿಐಡಿ ತಾಂತ್ರಿಕ ಘಟಕಕ್ಕೆ ಸಿಸಿಟಿವಿ ದೃಶ್ಯ ರವಾನೆ‌ ಮಾಡಿದ್ದು, ಎರಡು ಕಡೆ ತಾಂತ್ರಿಕವಾಗಿ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಲಿದ್ದಾರೆ. 

ಇದನ್ನೂ ವೀಕ್ಷಿಸಿ:  ಸಿಎಂ ಮುಡಾ ಹಗರಣದಲ್ಲಿ ಸಿಲುಕಿದ್ದು, ದಲಿತರಿಗೆ ಮೀಸಲಿಟ್ಟ ಜಾಗ ಕೊಳ್ಳೆ ಹೊಡೆದಿದ್ದಾರೆ: ಬಿವೈ ವಿಜಯೇಂದ್ರ