Jun 26, 2024, 4:34 PM IST
ಅದು ಆನಂದ ಮಾರ್ಗ ಅನ್ನೋ ಆಶ್ರಮ (Ananda Marg Ashram). ಕಳೆದೆರಡು ದಶಕಗಳಿಂದ ಸ್ಥಳೀಯರ ಸೇವೆ ಮಾಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ಇಕೊಟ್ಟುಕೊಂಡು ಬರ್ತಿತ್ತು. ಇವರ ಸೇವೆಗೆ ಮೆಚ್ಚಿ ಗ್ರಾಮಸ್ಥರೇ ಆಶ್ರಮಕ್ಕೆ ಒಂದಷ್ಟು ಭೂಮಿಯನ್ನ ದಾನ ಮಾಡಿದ್ರು. ಎಲ್ಲವೂ ಚೆನ್ನಾಗಿತ್ತು. ಆದ್ರೆ ಆವತ್ತೊಂದು ದಿನ ಆಶ್ರಮದ ಉಸ್ತುವಾರಿಯಾಗಿದ್ದ ಸ್ವಾಮಿಜಿಯೊಬ್ಬರು ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ರು. ಇನ್ನೂ ಕೊಲೆ ಮಾಡಿದವರು ಅದೇ ಆಶ್ರಮದಲ್ಲಿದ್ದ ಇಬ್ಬರು ಸ್ವಾಮೀಜಿಗಳು ಮತ್ತು ಟ್ರಸ್ಟ್‌ನ ಸದಸ್ಯ. ಮೂವರು ಸೇರಿಕೊಂಡು ಉಸ್ತುವಾರಿಗೆ ಚಿತ್ರಹಿಂಸೆ ಕೊಟ್ಟು ಕೊಂದು ಹಾಕಿದ್ರು. ಕೋಲಾರ(Kolar) ಜಿಲ್ಲೆ ಮಾಲೂರು ತಾಲ್ಲೂಕು ಸಂತೆಹಳ್ಳಿ ಗೇಟ್. ಆವತ್ತು ಜೂನ್ 22 ಶನಿವಾರ. ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಆಗ ತಾನೆ ನಿದ್ದೆಯಿಂದ ಎದ್ದು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ರು. ಇನ್ನೂ ಕೆಲವರು ಇನ್ನೂ ಹಾಸಿಗೆಯಲ್ಲೇ ಇದ್ರೂ ಅಷ್ಟೊತ್ತಿಗಾಗಲೇ ಆ ಗ್ರಾಮಕ್ಕೆ ಪೊಲೀಸರು ಎಂಟ್ರಿಯಾಗಿದ್ರು. ಕೋಲಾರದ ಮಾಲೂರು ಪೊಲೀಸರು(Police) ಆ ಗ್ರಾಮಕ್ಕೆ ಎಂಟ್ರಿ ಆಗ್ತಿದ್ದಂತೆ ಅಲ್ಲಿನ ಗ್ರಾಮಸ್ಥರಿಗೆ ಶಾಕ್ ಆಗಿತ್ತು. ಕಾರಣ ಪೊಲೀಸರು ಬಂದಿದ್ದು ಅದೊಂದು ಆಶ್ರಮಕ್ಕೆ. ದಶಕಗಳಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಅಕ್ಷರ ದಾಸೋಹ, ಆರೋಗ್ಯ ಸೇವೆ ಮಾಡಿ ಒಳ್ಳೆ ಹೆಸರು ಮಾಡಿದ್ದ ಆನಂದ ಮಾರ್ಗ ಅನ್ನೋ ಆಶ್ರಮಕ್ಕೆ. ಚಿದಾನಂದ ಸ್ವಾಮಿ.. ಇವರು ಕಳೆದ 10-12 ವರ್ಷದಿಂದ ಇದೇ ಆಶ್ರಮದಲ್ಲಿ ಸೇವೆ ಮಾಡಿಕೊಂಡು ಇದ್ರು. 2 ಎಕರೆಯಲ್ಲಿದ್ದ ಆಶ್ರಮವನ್ನ 12 ಎಕರೆಗೆ ವಿಸ್ತರಿಸಿ, ಸುತ್ತಮುತ್ತಲಿನ ಗ್ರಾಮಸ್ಥರಿಂದ ದೇಣಿಗೆಯನ್ನ ಪಡೆದು ಶಾಲೆ ಕಾಲೇಜು, ಆಸ್ಪತ್ರೆಗಳನ್ನ ಕಟ್ಟಿಸಿ ಜನರಿಗೆ ಸೇವೆ ಮಾಡುತ್ತಿದ್ರು.
ಇದನ್ನೂ ವೀಕ್ಷಿಸಿ: ಕೆಂಪೇಗೌಡ ಜಯಂತಿ ಹೆಸರಲ್ಲಿ ಸೇಡಿನ ರಾಜಕಾರಣ..? ಶಿಷ್ಟಾಚಾರ ಮರೆಯಿತಾ ಕಾಂಗ್ರೆಸ್ ಸರ್ಕಾರ..?