Aug 22, 2023, 2:43 PM IST
ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 6 ವರ್ಷವಾಗಿತ್ತು. ಮುದ್ದಾದ ಒಂದು ಮಗು ಕೂಡ ಇತ್ತು. ಸಂಬಂಧದಲ್ಲೇ ಮದುವೆಯಾಗಿದ್ರಿಂದ ಒಬ್ಬರ ಬಗ್ಗೆ ಒಬ್ಬರು ಚೆನ್ನಾಗಿ ಅರೆತ್ತಿದ್ರು. ಸುಖವಾಗಿ ಬಾಳ್ತಿದ್ರು. ಆದ್ರೆ ಇದ್ದಕ್ಕಿದ್ದಂತೆ ಆವತ್ತೊಂದು ದಿನ ಮೀನು ಹಿಡಿಯಲು ಹೋದವನು ಕೆರೆಯಲ್ಲೇ ಮುಳುಗಿ ಮೃತಪಟ್ಟಿದ್ದ. ಎಲ್ಲರೂ ಇದು ಆ್ಯಕ್ಸಿಡೆಂಟ್ ಅಂತ ಅಂದುಕೊಂಡಿದ್ರು. ಆದ್ರೆ ಸತ್ತವನ ಮನೆಯವರಿಗೆ ಮಾತ್ರ ಮಗನ ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಪೊಲೀಸ್ ಕಂಪ್ಲೆಂಟ್ ಕೊಟ್ಟು ಪೋಸ್ಟ್ ಮಾರ್ಟಮ್ ಮಾಡಿಸಿದ್ರು. ಆದ್ರೆ ಯಾವಾಗ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂತೋ ಸ್ವತಃ ಪೊಲೀಸರೇ ಶಾಕ್ ಆಗಿದ್ರು. ನವೀನ್ ತಂದೆ ಕಂಪ್ಲೆಂಟ್ ಕೊಟ್ಟಾಗ ಪೊಲೀಸರು(Police) ಮಗನನ್ನ ಕಳೆದುಕೊಂಡ ತಂದೆಯನ್ನ ನೋವಿಸಬಾರದು ಅಂತ ಆತ ಹೆಳಿದನ್ನೆಲ್ಲಾ ದಾಖಲಿಸಿಕೊಂಡ್ರು. ಆತನ ಸಮಾಧಾನಕ್ಕಾದ್ರೂ ಬೇಸಿಕ್ ಇನ್ವೆಸ್ಟಿಗೇಷನ್ ಮಾಡೋಣ ಅಂತ ಪೊಲೀಸರು ಗ್ರಾಮಕ್ಕೆ ಹೋಗಿ ನವೀನನ ಬಗ್ಗೆ ವಿಚಾರಿಸಿದ್ರು. ಆಗಲೇ ನೋಡಿ ಪೊಲೀಸರಿಗೆ ಆ ಗ್ರಾಮಸ್ಥರು ಒಂದು ಮಾಹಿತಿ ಕೊಡೋದು. ನವೀನನ ಹೆಂಡತಿ ಪವನಾ ಮೇಲೆ ಸಂಶಯ ವ್ಯಕ್ತಪಡಿಸೋದು. ಅನುಮಾನದ ಮೇಲೆ ಹೆಂಡತಿಯನ್ನ ಕರೆತಂದು ವಿಚಾರಣೆ ಮಾಡಿದಾಗ ನವೀನನ್ನ ಕೊಂದಿದ್ದು, ತಾನೇ ಅಂತ ಒಪ್ಪಿಕೊಂಡು ಬಿಡ್ತಾಳೆ. ಆದ್ರೆ ಅವಳೊಬ್ಬಳೇ ಗಂಡನ ಕಥೆಯನ್ನ ಮುಗಿಸಿಲ್ಲ ಅಂತ ಹೇಳೋ ಆಕೆ ತನ್ನ ಬಾಯ್ಫ್ರೆಂಡ್ ಬಗ್ಗೆಯೂ ಮಾಹಿತಿ ಕೊಡ್ತಾಳೆ.
ಇದನ್ನೂ ವೀಕ್ಷಿಸಿ: ಸಿದ್ದು ಸರ್ಕಾರದ ನಡೆಯ ಹಿಂದಿದ್ಯಾ I.N.D.I.A. ಋಣ..? ವಿರೋಧದ ಮಧ್ಯೆಯೂ ರಾಜ್ಯ ಸರ್ಕಾರ ನೀರು ಬಿಟ್ಟದ್ದೇಕೆ..?