Jun 26, 2021, 1:17 PM IST
ಬೆಂಗಳೂರು (ಜೂ. 26): ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ ಬಗ್ಗೆ ಇನ್ನಷ್ಟು ಅಪ್‌ಡೇಟ್ ಸಿಗುತ್ತಿದೆ. ರೇಖಾ ಕುಟುಂಬಸ್ಥರೇ ಹತ್ಯೆಗೆ ಸ್ಕೆಚ್ ಹಾಕಿದ್ದರಂತೆ. ಕದಿರೇಶ್ ಸಾವಿನ ಬಳಿಕ ರೇಖಾ ಪ್ರಭಾವಿಯಾಗಿ ಬೆಳೆದಿದ್ದರು. ಇವರ ಜನಪ್ರಿಯತೆ ವಿರೋಧಿಗಳಿಗೆ ನುಂಗಲಾರದ ತುತ್ತಾಗಿತ್ತು.
ರೇಖಾ ಹತ್ಯೆ ಮಾಡಿದವರ ಕಾಲಿಗೆ ಗುಂಡೇಟು, ಕಾರ್ಯಾಚರಣೆ ಹೇಗಿತ್ತು?
ಕದಿರೇಶ್ ಅಕ್ಕ ಮಾಲಾ, ರೇಖಾ ಹತ್ಯೆಗೆ ಮಕ್ಕಳೊಂದಿಗೆ ಸೇರಿ ಹತ್ಯೆಗೆ ಸ್ಕೆಚ್ ಹಾಕಿದ್ದರಂತೆ. ಸೊಸೆ ಪೂರ್ಣಿಮಾರನ್ನು ರಾಜಕೀಯಕ್ಕೆ ತರಲು ಚಿಂತಿಸಿದ್ದರು. ರೇಖಾರನ್ನು ಮುಗಿಸಿದರೆ ಪೂರ್ಣಿಮಾ ಗೆಲುವು ಸುಲಭ ಎಂಬುದು ಅವರ ಲೆಕ್ಕಾಚಾರ. ಹಾಗಾಗಿ ಸ್ಟೀಫನ್, ಪೀಟರ್, ಸೂರ್ಯ ಜೊತೆ ಸೇರಿ ಮಾಲಾ ಪಕ್ಕಾ ಪ್ಲ್ಯಾನ್ ಮಾಡಿದ್ದರು.