Jan 4, 2025, 9:36 AM IST
ಚಿಕ್ಕಬಳ್ಳಾಪುರ(ಜ.04): ಜೆಡಿಎಸ್ ಮುಖಂಡನನ್ನು ಮಚ್ಚು, ಲಾಂಗ್ ಗಳಿಂದ ಕೊಚ್ಚಿ ಭೀಕರ ಕೊಲೆ ಮಾಡಿರುವ ಘಟನೆ ತಾಲೂಕಿನ ತಮ್ಮನಾಯಕನಹಳ್ಳಿ ಗೇಟ್ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ಜೆಡಿಎಸ್ ಮುಖಂಡ ವೆಂಕಟೇಶ್ (50) ಕೊಲೆಯಾದ ದುರ್ದೈವಿ.
ವೆಂಕಟೇಶ್ ಸ್ವಗ್ರಾಮ ತಮ್ಮನಾಯಕನಹಳ್ಳಿ ಗ್ರಾಮದಿಂದ ಔಷಧಿಕೊಳ್ಳಲು ಎಲೆಕ್ನಿಕ್ ಬೈಕ್‌ನಲ್ಲಿ ತಮ್ಮನಾಯಕನಹಳ್ಳಿ ಗೇಟ್ ಬಳಿಯ ಮೆಡಿಕಲ್ ಸ್ಟೋರ್‌ಗೆ ಬಂದು ಔಷಧಿ ಖರೀದಿಸಿ ತೆರಳುತ್ತಿದ್ದಾಗ ಸುಮಾರು ನಾಲೈದು ಮಂದಿ ದುಷ್ಕರ್ಮಿಗಳು ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಮಚ್ಚು, ಲಾಂಗ್‌ಗಳಿಂದ ಕೊಚ್ಚಿ ಭೀಕರ ಕೊಲೆ ಮಾಡಿದ್ದಾರೆ. ಯಾರು, ಏಕೆ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ.
ಮುಖ್ಯಮಂತ್ರಿ ಬದಲಾವಣೆಗೆ ಹೇಳಿದ್ಯಾರು? ಗೊತ್ತಿಲ್ಲಪ್ಪ, ಸಿದ್ದರಾಮಯ್ಯನವರೇ ಸಿಎಂ
ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೆಂಕಟೇಶ್ ಕೊಲೆ ವಿಷಯ ತಿಳಿದು ಜೆಡಿಎಸ್ ಮುಖಂಡರು ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ.