ಮುಖ್ಯಮಂತ್ರಿ ಬದಲಾವಣೆಗೆ ಹೇಳಿದ್ಯಾರು? ಗೊತ್ತಿಲ್ಲಪ್ಪ, ಸಿದ್ದರಾಮಯ್ಯನವರೇ ಸಿಎಂ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತುಗಳು ಮತ್ತೆ ಶುರುವಾಗಿದೆ. ಒಂದಡೆ ಸಿದ್ದರಾಮಯ್ಯ ಟೀಂ ಮೀಟಿಂಗ್ ಮಾಡಿದ್ದ ಬೆನ್ನಲ್ಲೇ ಈ ಚರ್ಚೆ ಜೋರಾಗಿದೆ.
 

First Published Jan 4, 2025, 12:04 AM IST | Last Updated Jan 4, 2025, 12:04 AM IST

ಬೆಂಗಳೂರು(ಜ.03) ಕರ್ನಾಟಕದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮಾತುಗಳು ಕೇಳಿಬಂದಿದೆ. ಸಿದ್ದರಾಮಯ್ಯ ಆ್ಯಂಡ್ ಟೀಂ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಭೆ ಸೇರಿದ್ದಾರೆ. ಡಿನ್ನರ್ ಮೀಟಿಂಗ್,ಲಂಚ್ ಮೀಟಿಂಗ್ ಸೇರಿದಂತೆ ಸತತ ಸಭೆಗಳು ನಡೆಯುತ್ತಿದೆ. ಆದರೆ ಈ ಸಭೆ ಡಿಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ನಡೆಯುತ್ತಿದೆ. ಆದರೆ ಈ ಕುರಿತು ಕೃಷಿ ಸಚಿವ ಚೆಲುವರಾಯ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಹೇಳಿದ್ದು ಯಾರು? ಈ ವಿಚಾರ ಗೊತ್ತಿಲ್ಲ, ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದಿದ್ದಾರೆ.