Apr 24, 2024, 1:08 PM IST
ಬೆಂಗಳೂರು(ಏ.24): ಅವರಿಬ್ಬರು ಪ್ರೀತಿಸಿ ಮದುವೆಯಾದವರು.. ಮದುವೆ ಸಮಯದಲ್ಲಿ ಮನೆಯವರು ಒಪ್ಪದಿದ್ರೂ ಆ ಹುಡುಗಿ ಅವನೇ ಬೇಕು ಅಂತ ಗೋಗೆರೆದು ಅವನನ್ನ ಮದುವೆಯಾಗಿದ್ಲು.. ಆದ್ರೆ ಮದುವೆಯಾಗಿ 8 ತಿಂಗಳಾಗಿದೆ ಅಷ್ಟೇ.. ಇವತ್ತು ಆ ಹೆಣ್ಣು ಮಗಳು ತಾನು ಪ್ರೀತಿಸಿ ಮದುವೆಯಾದವನಿಂದಲೇ ಕೊಲೆಯಾಗಿ ಹೋಗಿದ್ದಾಳೆ.. ಮಲಗಿದ್ದಲ್ಲೇ ಗಂಡ ಅವಳ ಉಸಿರು ನಿಲ್ಲಿಸಿಬಿಟ್ಟಿದ್ದಾನೆ. ಅಷ್ಟಕ್ಕೂ ಮನಸಾರಿ ಪ್ರೀತಿಸಿದವಳನ್ನೇ ಗಂಡ ಕೊಂದಿದ್ದೇಕೆ..? ಅಂಥಹ ತಪ್ಪು ಅವಳು ಮಾಡಿದ್ದಾದರೂ ಏನು..? ಆವತ್ತು ರಾತ್ರಿ ಆ ಮನೆಯಲ್ಲಿ ನಡೆದಿದ್ದೇನು..? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್‌ಐಆರ್.
ಆತ ತನ್ನ ಪಾಡಿಗೆ ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಕುಟುಂಬವನ್ನ ನೋಡಿಕೊಂಡಿದ್ದ. ಎಂದಿನಂತೆ ಆವತ್ತು ಬೆಳಗ್ಗೆ ಎದ್ದು ಮನೆ ಕೆಲಸಗಳನ್ನ ಮುಗಿಸಿ ಕುಡಿಯೋದಕ್ಕೆ ನೀರು ತರಲು ಅಂತಾ ಬೋರವೇಲ್ ಹತ್ರ ಹೋಗಿದ್ದ. ಆದರೆ ನೀರು ತರಲು ಹೋದವನು ವಾಪಸ್ ಬರಲೇ ಇಲ್ಲ.. ಹೋಗಿ ನೋಡಿದ್ರೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಕಲ್ಲು ಎತ್ತಿಹಾಕಿ ಅವನನ್ನ ಬರ್ಬರವಾಗಿ ಕೊಲ್ಲಲ್ಲಾಗಿತ್ತು.. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಗೊತ್ತಾಗಿದ್ದು ಅವನ ಹೆಣ ಹಾಕಿದ್ದು ಪಕ್ಕದ ಮನೆಯ ಹುಡುಗನೇ ಅಂತ.
ಅವಳಿಗೆ ಸರ್ಕಾರಿ ಕೆಲಸ ಸಿಕ್ಕಿದ್ದೇ ತಪ್ಪಾಗಿಹೊಯ್ತು: ನಡು ರಸ್ತೆಯಲ್ಲೇ ಹೆಂಡತಿಗೆ ಮಚ್ಚಿನೇಟು!
ಕಾರಣ ಅದೇನೇ ಇರಲಿ ಅಕ್ಕ ಪಕ್ಕದ ಮನೆಯವರು ಅನ್ಯೋನ್ಯವಾಗಿ ಇರೋದನ್ನ ಬಿಟ್ಟು ತಮ್ಮ ಪಾಡಿಗೆ ತಾವಿದ್ದ ಕುಟುಂಬದ ಜೊತೆ ನಿತ್ಯ ಗಲಾಟೆ ತೆಗೆದು ಕೊಲೆ ಮಾಡಿರೋದು ನಿಜಕ್ಕೂ ದುರಂತವೆ ಸರಿ.