ಶಹಾಪೂರ ಅರಣ್ಯಾಧಿಕಾರಿ ಬರ್ಬರ ಹತ್ಯೆ! ಕ್ಷುಲ್ಲಕ ವಿಚಾರಕ್ಕೆ ಐವರು ದುಷ್ಕರ್ಮಿಗಳಿಂದ ಕೊಲೆ!

Jun 22, 2024, 11:15 AM IST

ಯಾದಗಿರಿ: ಕ್ಷುಲ್ಲಕ ವಿಚಾರಕ್ಕೆ ಅರಣ್ಯಾಧಿಕಾರಿಯ ಕೊಲೆ(Forest officer Murder) ಮಾಡಿರುವ ಘಟನೆ ಶಹಾಪೂರ(Shahapur) ಪಟ್ಟಣದ ಮೋಟಗಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಶಹಾಪೂರ ಅರಣ್ಯಾಧಿಕಾರಿ ಮಹೇಶ್ ಕನಕಟ್ಟಿಯನ್ನು ಬರ್ಬರವಾಗಿ ಹತ್ಯೆ(Murder) ಮಾಡಲಾಗಿದೆ. ಜೂನ್ 5 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕುಡಿದ ಅಮಲಿನಲ್ಲಿ ಅರಣ್ಯಾಧಿಕಾರಿಯನ್ನು ಐವರು ದುಷ್ಕರ್ಮಿಗಳು ಕೊಂದಿದ್ದಾರೆ ಎನ್ನಲಾಗ್ತಿದೆ. ಜೂನ್ 5 ರಂದು ಎಂದಿನಂತೆ ಮೋಟಗಿ ರೆಸ್ಟೋರೆಂಟ್‌ಗೆ ಊಟಕ್ಕೆ ಮಹೇಶ್‌ ತೆರಳಿದ್ದರು. ಈ ವೇಳೆ ಮೋಟಗಿ ರೆಸ್ಟೋರೆಂಟ್‌ನಲ್ಲಿ ಕುಡಿದು ಐವರು ಚೀರಾಡುತ್ತಿದ್ದರು. ಆಗ ಅರಣ್ಯಾಧಿಕಾರಿ ಮಹೇಶ್ ಹಾಗೂ ದುಷ್ಕರ್ಮಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಐವರು ದುಷ್ಕರ್ಮಿಗಳು ಬಡಿಗೆ ಹಾಗೂ ಕಾಲಿನಿಂದ ಜಾಡಿಸಿ ಒದ್ದು ಅಧಿಕಾರಿ ಕೊಲೆಗೈದಿದ್ದಾರೆ. ಮೋಟಗಿ ರೆಸ್ಟೋರೆಂಟ್ ಹೊರಗೆ ಮಹೇಶ್ ಶವ ಬಿದ್ದಿದ್ದು, ಸಹಜ ಸಾವು ಅಂತ ಪೋಸ್ಟ್ ಮಾರ್ಟಮ್‌ಗೆ ಪೊಲೀಸರು ಕಳುಹಿಸಿದ್ದಾರೆ. ಆದ್ರೆ ಇದು ಸಹಜ ಸಾವಲ್ಲ ಕೊಲೆ ಎಂಬ ಶಂಕೆಯನ್ನು ಅವರ ಪತ್ನಿ ನಾಗವೇಣಿ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾಗ ಕೊಲೆ ಎಂಬುದು ಬೆಳಕಿಗೆ ಬಂದಿದೆ. ಸದ್ಯ ಐವರು ಆರೋಪಿಗಳ ಹೆಡೆಮುರಿಯನ್ನು ಪೊಲೀಸರು ಕಟ್ಟಿದ್ದಾರೆ. ಐವರು ಆರೋಪಿಗಳ ವಿರುದ್ಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ವೀಕ್ಷಿಸಿ:  ಕಾಟೇರ ಬೆಡಗಿ ಯೋಗಾಭ್ಯಾಸ ! ಯೋಗ ಹೇಗೆ ಮಾಡ್ತಾರೆ ನೋಡಿ ಮಾಲಾಶ್ರೀ ಪುತ್ರಿ !