ಬೆಂಗಳೂರು: ಹಾಡಹಗಲೇ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ

Jun 24, 2021, 1:18 PM IST

ಬೆಂಗಳೂರು (ಜೂ. 24): ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್‌ರನ್ನು ದುಷ್ಕರ್ಮಿಗಳು ಹಾಡಹಗಲೇ ಹತ್ಯೆ ಮಾಡಿದ್ಧಾರೆ. ಇಂದು ಬೆಳಿಗ್ಗೆ ಆಂಜನಪ್ಪ ಗಾರ್ಡನ್‌ನಲ್ಲಿ ರೇಖಾ ಅವರು ಫುಡ್ ಕಿಟ್ ವಿತರಿಸುವಾಗ ಏಕಾಏಕಿ ದುಷ್ಕರ್ಮಿಗಳು ಹಲ್ಲೆ ನಡೆಸುತ್ತಾರೆ. ಕುತ್ತಿಗೆ, ತಲೆಗೆ ಮಚ್ಚಿನಿಂದ ಹಲ್ಲೆ ಮಾಡುತ್ತಾರೆ. ಕೂಡಲೇ ಪೊಲೀಸರು ವಿಕ್ಟೋರಿಯಾಗೆ ಸಾಗಿಸುತ್ತಾರೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿಯೇ ರೇಖಾ ಅಸುನೀಗಿದ್ದಾರೆ. ಕೌಟುಂಬಿಕ ಕಲಹದ ಶಂಕೆಯಿದೆ.

24 ಗಂಟೆಯೊಳಗೆ ರೇಖಾ ಕದಿರೇಶ್ ಹಂತಕರ ಬಂಧನ: ಸಿಎಂ ಬಿಎಸ್‌ವೈ