Belagavi Murder: ಹನಿಮೂನ್‌ಗೆ ಹೋದವಳಿಗೆ ಕಾರ್ ಡ್ರೈವರ್ ಮೇಲೆ ಲವ್..! ನವದಂಪತಿ ಕಥೆ ಮುಗಿಸಿದ ಮಾಜಿ ಗಂಡ..!

Feb 1, 2024, 4:52 PM IST

ಅವರಿಬ್ಬರು ಮದುವೆಯಾಗಿ ಒಂದುವರೆ ತಿಂಗಳಾಗಿತ್ತಷ್ಟೇ. ನವದಂಪತಿ ಖುಷಿಖುಷಿಯಿಂದ ಸಂಸಾರ ಶುರು ಮಾಡಿದ್ರು. ಹೀಗಿರುವಾಗ್ಲೇ ಆವತ್ತೊಂದು ದಿನ ಈ ದಂಪತಿ ಇದ್ದ ಮನೆಗೆ ಒಬ್ಬ ಬೇಡವಾದ ಅತಿಥಿ ಎಂಟ್ರಿ ಕೊಟ್ಟಿದ್ದ. ಬಂದವನೆ ಆ ಮನೆಯಲ್ಲಿದ್ದವರ ಮೇಲೆ ಮಚ್ಚು ಬೀಸಲು ಶುರು ಮಾಡಿದ್ದ. ಅವನ ಟಾರ್ಗೆಟ್ ಒಂದೇ  ಆ ದಂಪತಿಗಳ ಕಥೆ(Murder) ಮುಗಿಸೋದು. ಇನ್ನೂ ಆತನನ್ನ  ತಡೆಯಲು ಬಂದವರ ಮೇಲೆಯೇ ಆತ ಮಚ್ಚು ಬೀಸಲು ಶುರು ಮಾಡಿದ್ದ. ಕೊನೆಗೆ ಆ ಗಂಡ(Husband) ಹೆಂಡತಿಯ ಕಥೆ ಮುಗಿಸುವಲ್ಲಿಯೂ ಯಶಸ್ವಿಯಾದ. ತೌಫಿಕ್ ಕೊಂದಿದ್ದು ತನ್ನ ಮಾಜಿ ಹೆಂಡತಿ(Wife) ಮತ್ತು ಆಕೆಯ ಗಂಡನನ್ನ. ಹಂತಕ ತೌಫಿಕ್ ಮತ್ತು ಹೀನಾ ಕೌಸರ್ ಒಂದೂವರೆ ವರ್ಷದ ಹಿಂದೆ ಒಬ್ಬರನ್ನೊಬ್ಬರು ಪ್ರೀತಿಸಿ(Love) ಮಧುವೆಯಾಗಿದ್ರು. ಆದ್ರೆ ಈ ಜೋಡಿ ಸಂಸಾರ ಮಾಡಿದ್ದು ಕೆಲವೇ ತಿಂಗಳುಗಳಷ್ಟೇ. ನರ್ಸಿಂಗ್ ಕಲಿಬೇಕು ಅಂತ ಹೇಳಿ ಹೆಂಡತಿ ಕಾಲೇಜಿಗೆ ಹೋದಳು. ಆಗ ಪರಿಚಯವಾದವನೇ ಈ ಯಾಸಿನ್. ಇನ್ನೂ ಯಾಸಿನ್, ತೌಫಿಕ್ನ ಗೆಳೆಯ ಕೂಡ. ಗೆಳೆಯನ ಹೆಂಡತಿಯನ್ನೇ ಯಾಸಿನ್ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ನಂತರ ಒಂದುವರೆ ತಿಂಗಳ ಹಿಂದಷ್ಟೇ ಯಾಸಿನ್ ಮತ್ತು ಹೀನಾ ಗುಟ್ಟಾಗಿ ಮದುವೆಯಾಗಿ(Marriage) ಊರುಬಿಟ್ಟಿದ್ರು. ನಂತರ ಗ್ರಾಮಸ್ಥರೆಲ್ಲಾ ಸೇರಿ ರಾಜಿ ಪಂಚಾಯ್ತಿ ಮಾಡಿ ಯಾಸಿನ್ ಮತ್ತು ಹೀನಾ ಒಟ್ಟಿಗೆ ಇರುವಂತೆ ಮತ್ತು ಅವರಿಗೆ ಕಾಟ ಕೊಡದಂತೆ ತೌಫಿಕ್ನಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಆದ್ರೆ ಇಷ್ಟಾಗಿ ಒಂದುವರೆ ತಿಂಗಳಲ್ಲೇ ತೌಫಿಕ್ ಹೆಂಡತಿ ಮತ್ತು ಗೆಳೆಯನ ಕಥೆ ಮುಗಿಸಿದ್ದಾನೆ.

ಇದನ್ನೂ ವೀಕ್ಷಿಸಿ:  ಅನುದಾನ ತಾರತಮ್ಯ ಸರಿಹೋಗದಿದ್ದರೆ ಪ್ರತ್ಯೇಕ ರಾಷ್ಟ್ರ ಕೊಡಿ: ಸಂಸದ ಡಿಕೆ ಸುರೇಶ್‌