Nov 18, 2022, 11:27 AM IST
ಪ್ರೇಯಸಿಯನ್ನು ಕ್ರೂರವಾಗಿ ಕೊಂದ ಅಫ್ತಾಬ್ ಸಿಕ್ಕಿ ಹಾಕಿಕೊಂಡು ಇವತ್ತಿಗೆ 5 ದಿನಗಳಾಗಿವೆ. ಪೊಲೀಸರೂ ತನಿಖೆಯನ್ನು ಮಾಡುತ್ತಿದ್ದು, ಆತನಿಗೆ ಗಲ್ಲು ಶಿಕ್ಷೆಯೇ ಆಗ್ಬೇಕು ಎನ್ನುವ ಕೂಗು ಕೇಳಿ ಬರ್ತಿದೆ. ಆದರೆ ಈ ಕ್ರೂರಿಗೆ ಗಲ್ಲು ಆಗಬೇಕು ಅಂದ್ರೆ ಸಾಕ್ಷಿ ಬೇಕು. ಆದ್ರೆ ಸಾಕ್ಷಿಗಾಗಿ ಪೊಲೀಸರು ಪರದಾಡುತ್ತಿದ್ದು, ಅಫ್ತಾಬ್ ಸಂಪೂರ್ಣ ಮಾಹಿತಿಗಳನ್ನು ನೀಡುತ್ತಿಲ್ಲ. ಆತ ಕೃತ್ಯಕ್ಕೆ ಬಳಸಿದ್ದ ಮಚ್ಚು, ಶ್ರದ್ಧಾಳ ಫೋನ್, ಕೃತ್ಯ ನಡೆದಾಗ ಧರಿಸಿದ್ದ ಬಟ್ಟೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡ್ತಿಲ್ಲ. ಹೀಗಾಗಿ ಪೊಲೀಸರು ಮಂಪರು ಪರೀಕ್ಷೆ ನಡೆಸಲು ತಯಾರಿ ನಡೆಸುತ್ತಿದ್ದಾರೆ.