ಭೀಕರ ರಸ್ತೆ ಅಪಘಾತದಲ್ಲಿ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು

Jul 6, 2020, 5:08 PM IST

ಕಡೂರು(ಜು06): ಗೂಡ್ಸ್‌ ವಾಹನ ಹಾಗೂ ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಶಿಕ್ಷಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಡೂರು-ಬೀರೂರು ನಡುವಿನ ರಾಷ್ಟ್ರೀಯ ಹೆದ್ದಾರಿ 206ರ ಬ್ಯಾಗಡೆಹಳ್ಳಿ ಗೇಟ್‌ ಬಳಿ ಭಾನುವಾರ ನಡೆದಿದೆ. ಮೈ ಜುಂ ಎನ್ನುವ ಕ್ಷಣಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ.

ಅಜ್ಜಂಪುರದ ಉರ್ದು ಸರ್ಕಾರಿ ಶಾಲೆ ದೈಹಿಕ ಶಿಕ್ಷಕ, ಕಡೂರು ಪಟ್ಟಣದ ವಿದ್ಯಾನಗರ ನಿವಾಸಿ ಮಹಾಂತೇಶಪ್ಪ(52) ಮೃತರು. ಬೆಳಗ್ಗೆ ಕೆಲಸದ ನಿಮಿತ್ತ ಕಡೂರಿನಿಂದ ಬೀರೂರಿಗೆ ತೆರಳುತ್ತಿದ್ದ ವೇಳೆ ಬ್ಯಾಗಡೆ ಗೇಟ್‌ ಬಳಿ ತರೀಕೆರೆ ಕಡೆಯಿಂದ ಬರುತ್ತಿದ್ದ ಗೂಡ್ಸ್‌ ಹಾಗೂ ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. 

ಬೈಲಹೊಂಗಲ: ಮಗನ ಕಿರುಕುಳಕ್ಕೆ ಬೇಸತ್ತು ತಾಯಿ ಆತ್ಮಹತ್ಯೆ

ಘಟನೆಯಲ್ಲಿ ತೀವ್ರ ಗಾಯಗೊಂಡ ಮಹಾಂತೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಬೀರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.