May 12, 2024, 11:47 AM IST
ಬೆಂಗಳೂರು(ಮೇ.12): ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಅಪ್ಪ ರೇವಣ್ಣ ಅಂದರ್ ಆದ್ರೆ ಮಗ ಇನ್ನೂ ಭಾರತಕ್ಕೆ ಬಂದೇ ಇಲ್ಲ. ಆದ್ರೆ ತನಿಖೆ ನಡೆಸುತ್ತಿರೋ ಎಸ್ಐಟಿ ಮಾತ್ರ ಕೆಲವರಿಗೆ ನೋಟೀಸ್ ಕೊಟ್ಟು ಸುಮ್ಮನ್ನಾಗಿದ್ರೆ ಇನ್ನೂ ಕೆಲವರನ್ನ ವಷಕ್ಕೆ ಪಡೆದುಕೊಂಡಿದೆ. ಅದರಲ್ಲಿ ಲೇಟೆಸ್ಟ್ ಲಾಯರ್ ಕಮ್ ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ. ಈ ದೇವರಾಜೇಗೌಡ ಎರಡೆರಡು ಬಾರಿ ಪ್ರೆಸ್ಮೀಟ್ ಮಾಡಿ ಕಾಂಗ್ರೆಸ್ ಸರ್ಕಾರವೇ ಪೆನ್ಡ್ರೈವ್ ವೈರಲ್ ಮಾಡಿದ್ದು ಅಂತ ಹೇಳಿ ಸಾಕ್ಷಿಗಳನ್ನೂ ಬಿಡುಗಡೆ ಮಾಡಿದ್ರು. ಆದ್ರೆ ಸೀನ್ ಕಟ್ ಮಾಡಿದ್ರೆ ಇವತ್ತು ಸ್ವತಃ ತಾನೇ ಬಂಧನವಾಗಿದ್ದಾನೆ. ಅಷ್ಟಕ್ಕೂ ದೇವರಾಜೇಗೌಡರ ಬಂಧನವಾಗಿದ್ದೇಕೆ..?ದೇವರಾಜೇಗೌಡ ಆವತ್ತು ಮಾಡಿದ್ದ ಆರೋಪ ನಿಜ ಆಯ್ತಾ ? ಪೆನ್ಡ್ರೈವ್ ಹೋರಾಟಗಾರನೇ ಕಂಬಿ ಹಿಂದೆ ಹೋಗಿದ್ದೇಕೆ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇವತ್ತಿನ ಎಫ್ಐಆರ್..!
ಹಾಗಾದ್ರೆ ಸರ್ಕಾರ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮಾತನ್ನಾಡಿದ್ದೇ ದೇವರಾಜೇಗೌಡರ ಬಂಧನಕ್ಕೆ ಕಾರಣವಾಯ್ತು. ಅವರೇ ಹೇಳಿದ್ದಂತೆ ಅವರನ್ನ ಈ ಕೇಸ್ನಲ್ಲಿ ಸಿಕ್ಕಿಸುವ ಕೆಲಸ ಆಗಿದ್ಯಾ..? ಅದು ಗೊತ್ತಿಲ್ಲ.. ಆದ್ರೆ ದೇವರಾಜೇಗೌಡರು ಸದ್ಯ ಅರೆಸ್ಟ್ ಆಗಿರೋದು ಪೆನ್ಡ್ರೈವ್ ವೈರಲ್ ಮಾಡಿದ ಪ್ರಕರಣದಲ್ಲಿ ಅಲ್ಲ ಬದಲಿಗೆ ಲೈಂಗಿಕ ದೌರ್ಜನ್ಯದ ಕೇಸ್ನಲ್ಲಿ.
ಮದುವೆಯಾಗಿ 8 ತಿಂಗಳಿಗೇ ಅವಳು ಬೇಡವಾಗಿದ್ಲು..! ಅವಳ ಕಥೆ ಮುಗಿಸಿ ಬಾಮೈದನಿಗೆ ಚಾಲೆಂಜ್ ಹಾಕಿದ..!
ಅದು ಕಳೆದ ಏಪ್ರಿಲ್ನಲ್ಲಿ ದಾಖಲಾಗಿದ್ದ ಪ್ರಕರಣ.ಮೊದಲು ದೇವರಾಜೇಗೌಡರು ಹನಿಟ್ರ್ಯಾಪ್ ಪ್ರಕಣವನ್ನ ದಾಖಲಿಸಿದ್ರು. ಇದಾದ 3ನೇ ದಿನಕ್ಕೆ ಮಹಿಳೆ ಇದೇ ದೇವರಾಜೇಗೌಡರ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದಳು. ದೇವರಾಜೇಗೌಡರು ನಿರೀಕ್ಷಣಾ ಜಾಮೀನಿಗೆ ನ್ಯಾಯಾಲಯದಲ್ಲಿ ಅರ್ಜಿಯನ್ನೂ ಹಾಕಿದ್ರು. ಅದ್ಯಾವಾಗ ಆ ಅರ್ಜಿ ಮುಂದೂಡಿಕೆ ಆಯ್ತೋ ಪೊಲೀಸರು ದೇವರಾಜೇಗೌಡರನ್ನ ಲಾಕ್ ಮಾಡಿಕೊಂಡ್ರು. ಆದ್ರೆ ಅರೆಸ್ಟ್ ಆಗುವ ಮುನ್ನ ದೇವರಾಜೇಗೌಡರು ಒಂದು ವಿಡಿಯೋ ಮಾಡಿ ಈ ಪ್ರಕರಣದ ಮಾಹಿತಿ ಕೊಟ್ಟಿದ್ದಲ್ಲದೇ ಇದು ತಮ್ಮ ವಿರುದ್ಧದ ಷಡ್ಯಂತ್ರ ಅಂದಿದ್ರು.ಏನೇ ಆಗಲಿ ಸದ್ಯ ದೇವರಾಜೇಗೌಡರ ಬಂದನ ಈಗ ಹಲವು ಅನುಮಾನಕ್ಕೆ ಕಾರಣವಾಗಿದೆ.. ಆದ್ರೆ ಕಾನೂನಿನ ಪ್ರಕಾರ ಅವರ ಅರೆಸ್ಟ್ ಸರಿಯಾಗೇ ಇದೆ. ಇನ್ನೂ ಈ ಪೆನ್ಡ್ರೈವ್ ಕೇಸ್ನಲ್ಲಿ ಜನ ಏನೇನು ನೋಡಬೆಕೋ ಆ ದೇವರೇ ಬಲ್ಲ ಅಂತ.