ಸತತ 10 ಗಂಟೆಗಳ ಕಾರ್ಯಾಚರಣೆ: ಜೈನಮುನಿ ಮೃತದೇಹ ಪತ್ತೆ, ಆಶ್ರಮದಲ್ಲಿ ನೀರವ ಮೌನ

Jul 9, 2023, 9:40 AM IST

ಬೆಳಗಾವಿ: ಚಿಕ್ಕೋಡಿಯ ಹಿರೇಕೋಡಿಯ ಜೈನಮುನಿಗಳ ಹತ್ಯೆ(Jain Monk Murder) ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಭೀಕರವಾಗಿ ಮಾಡಲಾಗಿದೆ. ಸತತ 10 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಶ್ರೀಗಳ ಮೃತದೇಹ(Deadbody) ಪತ್ತೆಯಾಗಿದೆ. ಕಾಮಕುಮಾರ ಶ್ರೀಗಳ ಮೃತದೇಹವನ್ನು ಬೆಳಗಾವಿ(Belagavi) ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪಾರ್ಥಿವ ಶರೀರವನ್ನು ಹಸ್ತಾಂತರ ಮಾಡಲಾಗುವುದು. ಮುನಿಗಳ ಅಂತ್ಯಕ್ರಿಯೆಯಲ್ಲಿ ಅಪಾರ ಭಕ್ತಗಣ ಪಾಲ್ಗೊಳ್ಳುವ ಸಾಧ್ಯತೆ ಇದೆ. ಶಾಸಕ ಗಣೇಶ್‌ ಹುಕ್ಕೇರಿ, ಸಂಸದ ಜೊಲ್ಲೆ ಸೇರಿ ಹಲವರು ಭಾಗಿಯಾಗಲಿದ್ದಾರೆ ಎನ್ನಲಾಗ್ತಿದೆ. ಬೆಳಗಾವಿ ಎಸ್‌ಪಿ ಸಂಜೀವ್‌ ಪಾಟೀಲ್‌(Sanjeev patil) ನೇತೃತ್ವದಲ್ಲಿ ಭದ್ರತೆಯನ್ನು ಒದಗಿಸಲಾಗುವುದು. 

ಇದನ್ನೂ ವೀಕ್ಷಿಸಿ:  Today Rashibhavishy: ಈ ದಿನ ಸಪ್ತಮಿ ಯೋಗವಿದ್ದು, ಸೂರ್ಯಾರಾಧನೆ ಮಾಡಿ..