Basavalinga Swamiji Death: ಒಂದಲ್ಲ, ಎರಡಲ್ಲ, 3 ಡೆತ್‌ ನೋಟ್‌ ಬರೆದಿದ್ದ ಬಸವಲಿಂಗ ಸ್ವಾಮೀಜಿ

Oct 27, 2022, 5:43 PM IST

ರಾಮನಗರ (ಅ. 27):  ಕಂಚುಗಲ್ ಬಂಡೇಮಠದ ಪೀಠಾ​ಧ್ಯ​ಕ್ಷ​ರಾ​ಗಿದ್ದ ಶ್ರೀ ಬಸವಲಿಂಗ ಸ್ವಾಮೀಜಿ (Basavalinga Swamiji Death) ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ.  ಬಸವಲಿಂಗ ಶ್ರೀ ಒಟ್ಟು  6 ಪುಟಗಳ ಡೆತ್ ನೋಟ್ ಬರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶ್ರೀಗಳು ಪೊಲೀಸರಿಗೆ ಅಡ್ರೆಸ್ ಮಾಡಿ 3 ಪುಟಗಳ ಡೆತ್ ನೋಟ್,  ಭಕ್ತರು ಮತ್ತು ಇತರ ಶ್ರೀಗಳಿಗೆ ಅಡ್ರೆಸ್ ಮಾಡಿ 3 ಪುಟಗಳ ಡೆತ್ ನೋಟ್‌ ಬರೆದಿದ್ದಾರೆ.  ಮೊದಲು ಒಂದು ಪುಟ ಬರೆದು ಅದನ್ನ ಹರಿದು ಕಿಟಕಿಯಲ್ಲಿ ಶ್ರೀಗಳು ಬಿಸಾಡಿದ್ದರು. ಶ್ರೀಗಳು ಒಂದೇ ವಿಷಯವನ್ನ ಎರಡೂ ಪತ್ರಗಳಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಎಲ್ಲವನ್ನೂ ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ 

Basavalinga Swamiji Death: ಸ್ವಾಮೀಜಿ ಹನಿಟ್ರ್ಯಾಪ್‌ಗೆ ವ್ಯವಸ್ಥಿತ ಪ್ಲಾನ್? ಒಂದಲ್ಲ, ಎರಡಲ್ಲ 20 ವಿಡಿಯೋ?