Jan 3, 2024, 11:26 AM IST
ಬೆಳಗಾವಿಯಲ್ಲಿ(Belagavi) ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಅಂಗನವಾಡಿ ಶಿಕ್ಷಕಿಯ(Aganwadi teacher) ಮೂಗು ಕತ್ತರಿಸಿ(Nose cut) ರಾಕ್ಷಸಿ ಕೃತ್ಯವೆಸಲಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಕ್ಷೇತ್ರದಲ್ಲೇ ಇಂಥದೊಂದು ಅಮಾನವೀಯ ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮಕ್ಕಳು ಮಾಡಿದ ತಪ್ಪಿಗೆ ಅಂಗನವಾಡಿ ಸಹಾಯಕಿಗೆ ಶಿಕ್ಷೆ ನೀಡಲಾಗಿದೆ. ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದ ಸಹಾಯಕಿ ಸುಗಂಧಾಗೆ ಶಿಕ್ಷೆ ನೀಡಲಾಗಿದೆ. ಅಂಗನವಾಡಿ ಪಕ್ಕದಲ್ಲಿದ್ದ ಹೂ ಕಿತ್ತಿದ್ದಕ್ಕೆ ಸಹಾಯಕಿಯ ಮೂಗು ಕಟ್ ಮಾಡಲಾಗಿದೆ. ಮನೆ ಮಾಲೀಕ ಕಲ್ಯಾಣಿ ಮೋರೆ ಎಂಬಾತನಿಂದ ಈ ಕೃತ್ಯವೆಸಗಲಾಗಿದೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಮೂಗನ್ನೇ ಕತ್ತರಿಸಿದ ಆಸಾಮಿ. ಹಲ್ಲೆಗೊಳಗಾದ ಸಹಾಯಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಅಮಾನವೀಯ ಕೃತ್ಯ ನಡೆದಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ವೀಕ್ಷಿಸಿ: ರಾಮಮಂದಿರ ಉದ್ಘಾಟನೆ ಆಹ್ವಾನದಲ್ಲೂ ಜಟಾಪಟಿ..! ಈ ವಿಚಾರದಲ್ಲಿ ರಾಜಕೀಯ ಮಾಡ್ತಿದ್ಯಾ ಬಿಜೆಪಿ..?