Crime News: ಎರಡು ಗ್ಯಾಂಗ್‌ಗಳ ನಡುವೆ ಡೆಡ್ಲಿ ವಾರ್..!ಮೂವರು ಮಟಾಷ್, ಒಬ್ಬನಿಗೆ ಗುಂಡೇಟು..!

May 21, 2024, 3:58 PM IST

ಅವರೆಲ್ಲಾ ಅಕ್ಕಪಕ್ಕದ ಏರಿಯಾದ ಪಂಟರ್‌ಗಳು. ಆದ್ರೆ ಒಂದು ಟೀಮ್‌ ಕಂಡ್ರೆ ಮತ್ತೊಂದು ಟೀಂಗೆ ಆಗೊಲ್ಲ. ಕೆಲ ವರ್ಷಗಳಿಂದ ಆ ಎರಡು ಗ್ಯಾಂಗ್‌ಗಳ(Gang War) ನಡುವಿನ ಸಂಬಂಧ ಬೂದಿ ಮುಚ್ಚಿದ ಕೆಂಡದಂತಿತ್ತು. ಆದ್ರೆ ಅದು ಬೆಂಕಿಯಾಗಿ ತಿರುಗಿದ್ದು ತಿಂಗಳ ಹಿಂದೆ ನಡೆದ ಕ್ರಿಕೆಟ್ ಟೂರ್ನಮೆಂಟ್. ಎದುರಾಳಿ ಗ್ಯಾಂಗ್ ಲೀಡರ್‌ಗೆ ಸನ್ಮಾನ ಮಾಡಿದ್ರು ಅನ್ನೋ ಒಂದೇ ಕಾರಣಕ್ಕೆ ಅಲ್ಲಿ ಸ್ಕೆಚ್ ರೆಡಿಯಾಗಿತ್ತು. ಆದ್ರೆ ಎದುರಾಳಿಯನ್ನ ಮುಗಿಸಲು ಬಂದವರೇ ಅಲ್ಲಿ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ರು. ಅಷ್ಟೇ ಅಲ್ಲ ಅವರ ಟಾರ್ಗೆಟ್ ಕೂಡ ಹಿಟ್ ಆಗಿತ್ತು. ಹೀಗೆ ಎರಡು ಗ್ಯಾಂಗ್‌ಳ ನಡುವೆ ನಡೆದ ವಾರ್ ಮೂರು ಹೆಣಗಳನ್ನ(Died) ಉರುಳಿಸಿತ್ತು. ಕುರೇಶಿಯನ್ನ ಮುಗಿಸಲು ಬಂದ ಗೌಸ್ ಮತ್ತು ಸೇಬು ಬರ್ಬರವಾಗಿ ಕೊಲೆಯಾಗಿಬಿಡ್ತಾರೆ. ಹಾಗಂತ ಆದೀಲ್ ಹಾಕಿದ್ದ ಸ್ಕೆಚ್ ಮಿಸ್ ಆಯ್ತು ಅಂತ ಅಂದುಕೊಳ್ಳಬೇಡಿ. ಇತ್ತ ಸೇಬು ಮತ್ತು ಗೌಸ್ ಕೊನೆಯುಸಿರು ಎಳೆಯುತ್ತಿದ್ರೆ ಅತ್ತ ಕುರೇಶಿ ಆದೀಲ್ನಿಂದ ಮಚ್ಚಿನೇಟು ತಿಂತಿದ್ದ. ಆದೀಲ್ ಪಾಷಾ ಗ್ಯಾಂಗ್ ಇಕಟ್ಟಿಕೊಂಡು ಕುರೇಶಿ ಮಟನ್ ಸ್ಟಾಲ್ ಕಡೆಗೆ ನುಗ್ತಾನೆ. ಅಂದುಕೊಂಡಂತೆ ಹೋಗಿ ಕುರೇಶಿಯ ಮೇಲೂ ಅಟ್ಯಾಕ್ ಮಾಡ್ತಾರೆ. ಆದ್ರೆ ಇದೇ ಟೈಂನಲ್ಲಿ ಅಲ್ಲೇ ಇದ್ದ ಕುರೇಶಿ ಹುಡುಗರು ರಿಟರ್ನ್ ಅಟ್ಯಾಕ್ ಮಾಡ್ತಾರೆ. ಆದ್ರೆ ಅಷ್ಟರಲ್ಲೇ ಆದೀಲ್ ಆ್ಯಂಡ್ ಗ್ಯಾಂಗ್ ಎಸ್ಕೆಪ್ ಆಗ್ತಾರೆ. ಸಾವು ಬದುಕಿನ ನಡುವೆ ಹೋರಾಡ್ತಿದ್ದ ಕುರೇಶಿಯನ್ನ ಒಂದು ಗ್ಯಾಂಗ್ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದ್ರೆ ಮತ್ತೊಂದು ಗ್ಯಾಂಗ್ ಆದೀಲ್ ಹುಡುಗರ ಹುಡುಕಾಟಕ್ಕೆ ಹೋಗ್ತಾರೆ. ಆಗಲೇ ಸೇಬು ಮತ್ತು ಗೌಸ್ ತಗ್ಲಾಕಿಕೊಂಡು ಬರ್ಬರವಾಗಿ ಮರ್ಡರ್ ಆಗೋದು.. ಇನ್ನೂ ಕುರೇಶಿ ಕೂಡ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣಬಿಡ್ತಾನೆ.. ಈ ಮೂಲಕ ಒಂದು ಗ್ಯಾಂಗ್ ವಾರ್ ಮೂವರ ಬಲಿ ಪಡೆದುಬಿಡುತ್ತೆ.

ಇದನ್ನೂ ವೀಕ್ಷಿಸಿ:  ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಸಿಬಿಐ ಹೆಗಲಿಗೆ ಬೀಳುತ್ತಾ? ಹೈಕೋರ್ಟ್‌ ಮೊರೆ ಹೋಗಲು ಹೆಚ್‌ಡಿಕೆ ಚಿಂತನೆ?