May 15, 2022, 5:55 PM IST
ಮಡಿಕೇರಿ(ಮೇ.15) ಕೊಡಗು ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ (International Cricket Stadium) ಜಾಗದ ವಿವಾದ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸ್ಮಶಾನ ಜಾಗದಿಂದಾಗ ಕಳೆದ ನಾಲ್ಕು ವರ್ಷದಿಂದ ನಡೆಯುತ್ತಿದ್ದ ಹೋರಾಟ ಇದೀಗ ಮತ್ತೆ ಹೊಸ ರೂಪ ತಾಳಿದೆ. ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಹೈಡ್ರಾಮ ನಡೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
ಈ ಹೈಡ್ರಾಮಕ್ಕೆ ಸಾಕ್ಷಿಯಾಗಿದ್ದು ಕೊಡಗು ಜಿಲ್ಲೆಯ ಹೊದ್ದೂರು ಗ್ರಾಮ. ಮಡಿಕೇರಿ ತಾಲೂಕಿನ ಈ ಗ್ರಾಮದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಗೆ ಜಿಲ್ಲಾಡಳಿತ 12.70 ಎಕರೆ ಜಾಗ ನೀಡಿದ್ದು ಕಾಮಗಾರಿಯನ್ನು ಆರಂಭಿಸಲಾಗಿತ್ತು.ಆದರೆ ಸ್ಮಶಾನ ಜಾಗದ ನೆಪದಲ್ಲಿ ಸ್ಥಳೀಯ ಪರಿಶಿಷ್ಟ ಜನಾಂಗದವರು ಪದೇ ಪದೇ ಕಾಮಗಾರಿಗೆ ತಡೆಯೊಡುತ್ತಿದ್ದರು. ಆದ್ದರಿಂದ ಒಂದು ಎಕರೆಯನ್ನು ಸ್ಮಶಾನಕ್ಕೆ ನೀಡಿ ಉಳಿದ 11.70 ಎಕೆರೆಯನ್ನು ಕ್ರೀಡಾಂಗಣಕ್ಕೆ ನೀಡಲಾಗಿದೆ. ಇದೀಗ ಕಾಮಗಾರಿ ಆರಂಭವಾಗುತ್ತಿದ್ದಂತೆ ಮತ್ತೆ ಪ್ರತಿಭಟನೆ ಆರಂಭ ಮಾಡಲಾಗಿದ್ದು, ಜೆಸಿಬಿಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಲಾಯಿತು.
Match Fixing ಶಂಕೆ: ಐಪಿಎಲ್ ಬೆಟ್ಟಿಂಗ್‌ಗೆ ಪಾಕ್ ನಂಟು..!
ಈ ಸಂದರ್ಭ ಹೋರಾಟಗಾರ ಮುಖಂಡ ಮೊಣ್ಣಪ್ಪ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಉಳಿದವರು ಸ್ಥಳದಲ್ಲಿ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಎರಡು ದಿನಗಳ ಕಾಲಾವಕಾಶ ನೀಡಿದ್ದು ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.