ಮೊದಲ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಶುರುವಾಯ್ತು ಗೊಂದಲ..!

Mar 12, 2020, 2:27 PM IST

ಧರ್ಮಶಾಲಾ(ಮಾ.12): ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸರಣಿಗೆ ಈಗಾಗಲೇ ಸುನಿಲ್ ಜೋಶಿ ನೇತೃತ್ವದ ಆಯ್ಕೆ ಸಮಿತಿ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ಇದೀಗ ಕೊಹ್ಲಿ-ಶಾಸ್ತ್ರಿಗೆ ತಲೆನೋವು ಶುರುವಾಗಿದೆ.

ಕೊರೋನಾ ಭೀತಿಯಲ್ಲೇ ಆರಂಭವಾಗಲಿದೆ ಇಂಡೋ-ಆಫ್ರಿಕನ್ ವಾರ್..!

ಹೌದು, 15 ಆಟಗಾರರ ಪೈಕಿ ಅಂತಿಮ ಹನ್ನೊಂದರ ಬಳಗ ಹೇಗಿರಬೇಕು ಎನ್ನುವ ಗೊಂದಲು ಕೊಹ್ಲಿಗೆ ಆರಂಭವಾಗಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ಹೊಂದಾಣಿಕೆ ಬಗ್ಗೆ ಲೆಕ್ಕಾಚಾರಗಳು ಆರಂಭವಾಗಿವೆ.

ಇಂಡೋ-ಆಫ್ರಿಕಾ ಮೊದಲ ಪಂದ್ಯ ನಡಿಯೋದು ಡೌಟ್..!

ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಮೂರು ವಿಭಾಗದಲ್ಲಿ ಗೊಂದಲ ಆರಂಭವಾಗಿದೆ. ಆರಂಭಿಕರು ಯಾರು? ಬೌಲಿಂಗ್ ವಿಭಾಗದಲ್ಲಿ ಬುಮ್ರಾಗೆ ಸಾಥ್ ನೀಡೋರು ಯಾರು ಸೇರಿದಂತೆ ಮೂರು ವಿಭಾಗದಲ್ಲಿ ಗೊಂದಲ ಆರಂಭವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.