Mar 28, 2020, 4:06 PM IST
ನವದೆಹಲಿ(ಮಾ.28): ಕೊರೋನಾ ವೈರಸ್‌ನಿಂದ ಕಂಗೆಟ್ಟಿದ್ದ ಸಾಲಗಾರರಿಗೆ ಇಎಂಐನಿಂದ ಕೊಂಚ ರಿಲೀಫ್ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಸಂತೋಷದ ಸುದ್ದಿಯೊಂದನ್ನು ನೀಡಿದೆ. ಇದೀಗ ಮೂರು ತಿಂಗಳು ವಿದ್ಯುತ್ ಬಿಲ್ ವಿನಾಯಿತಿಯನ್ನು ನೀಡಿದೆ.
ಮುಂದಿನ 3 ತಿಂಗಳು EMI ಪಾವತಿ ಮಾಡೋದು ಬೇಡ್ವಾ..?
ಮೂರು ತಿಂಗಳು ವಿದ್ಯುತ್ ವಿನಾಯಿತಿ ಸಿಕ್ಕಿದರೆ, ಮೂರು ತಿಂಗಳ ಬಳಿಕ ವಿದ್ಯುತ್ ಬಿಲ್ ಪಾವತಿಸಿದರೂ ದಂಡ ವಿಧಿಸುವಂತಿಲ್ಲ. ಈಗಾಗಲೇ ಭಾರತ ಲಾಕ್‌ಡೌನ್‌ನಿಂದ ಕಂಗಾಲಾಗಿ ಕುಳಿತಿರುವ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಕೇಂದ್ರ ಸರ್ಕಾರ.
ಕೊರೋನಾ ಭೀತಿ ನಡುವೆಯೇ ಬಂತು ಸಮಾಧಾನಕರ ಸುದ್ದಿ!
ವಿದ್ಯುತ್ ಗ್ರಾಹಕರಿಗೆ ಮಾತ್ರವಲ್ಲದೇ ವಿದ್ಯುತ್ ಸರಬರಾಜು ಕಂಪನಿಗಳಿಗೂ ಸಮಾಧಾನಕರವಾದ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ. ವಿದ್ಯುತ್ ಸರಬರಾಜು ಕಂಪನಿಗಳು ಖರೀದಿಸುವ ವಿದ್ಯುತ್‌ಗೆ ಯಾವುದೇ ಭದ್ರತಾ ಠೇವಣಿ ಇಡದೇ ಖರೀದಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.